ಬೆಂಗಳೂರು:ಕಂಟೇನರ್ ಪಲ್ಟಿಯಾದ ಪರಿಣಾಮ ಬೈಕ್ ಸವಾರ ಲಾರಿ ಕಳೆಗೆ ಸಿಲುಕಿ ನರಳಾಡಿದ ಘಟನೆ ಬೆಂಗಳೂರಿನ ಟೌನ್ ಹಾಲ್ ಬಳಿ ಇಂದು ನಡೆದಿದೆ.
ಕಂಟೇನರ್ ಕೆಳಗೆ ಸಿಲುಕಿದ ಬೈಕ್ ಸವಾರನನ್ನ ಪತ್ರಕರ್ತ ಗಂಗಾಧರ್ ಮೂರ್ತಿ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಇವರನ್ನ ಈಗ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ಕೊಟ್ಟಿದ್ದಾರೆ. ಪರಿಶೀಲನೆ ಮಾಡಿದ್ದಾರೆ. ಕಂಟೇನರ್ ಪಲ್ಟಿಯಾಗಿದ್ದರಿಂದ ಟ್ರಾಫಿಕ್ ಜಾಮ್ ಕೂಡ ಆಗಿತ್ತು. ಹಲಸೂರು ಗೇಟ್ ಸಂಚಾರಿ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
PublicNext
23/01/2022 06:11 pm