ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾ.ಹೆದ್ದಾರಿ 4 ರಲ್ಲಿ ಸರಣಿ ಅಪಘಾತ ; ವಾಹನಗಳು ಜಖಂ

ನೆಲಮಂಗಲ : ರಾ.ಹೆದ್ದಾರಿ 4 ತುಮಕೂರು ಬೆಂಗಳೂರು ರಸ್ತೆಯ ಟಿ.ಬೇಗೂರು ಬಳಿ ಸರಣಿ ಅಪಘಾತ ಸಂಭವಿಸಿದೆ. ನೆಲಮಂಗಲ ತಾಲೂಕಿನ ಟಿ.ಬೇಗೂರಿನಲ್ಲಿ ಘಟನೆಯಲ್ಲಿ ನಡೆದಿದ್ದು, ಒಂದು ಬಸ್,ಎರಡು ಲಾರಿ, ಒಂದು ಬುಲೆರೋ ನಡುವೆ ಸರಣಿ ಅಪಘಾತವಾಗಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ.

ಇನ್ನು ಸರಣಿ ಅಪಘಾತ ಹಿನ್ನೆಲೆಯಲ್ಲಿ ತುಮಕೂರು ರಸ್ತೆಯ ಎರಡು ಬದಿಯ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, 3 ಲಾರಿ, 2 ಕಾರು, 1 ಇಚ್ಚರ್ ವಾಹನ, 1 ಖಾಸಗಿ ಬಸ್, 1 ಬೊಲೆರೋ ವಾಹನ ನಡುವೆ ಅಪಘಾತವಾಗಿದೆ.

ಇದರಿಂದಾಗಿ ಕೆಲಸಕ್ಕೆ ತೆರಳುವ ಜನ ಪರದಾಡುವಂತಾಗಿದೆ. ಘಟನೆಯಲ್ಲಿ ಕೆಎಸ್ ಆರ್ ಟಿಸಿ ಬಸ್ ಪ್ರಯಾಣಿಕರಿಗೆ ಹಾಗೂ ಖಾಸಗಿ ಬಸ್ ಚಾಲಕನಿಗೆ ಮತ್ತು ಪ್ರಯಾಣಿಕರಿಗೆ ಸಣ್ಣಪುಟ್ಟಗಾಯವಾಗಿದೆ.

ಘಟನೆಯಲ್ಲಿ ಕಾರು, ಇಚ್ಚರ್ ವಾಹನ, ಲಾರಿಗಳು ಬಸ್ ಗಳು ಜಖಂಗೊಂಡಿದ್ದು, ಸ್ಥಳಕ್ಕೆ ನೆಲಮಂಗಲ ಸಂಚಾರಿ ಠಾಣಾ ಪೊಲೀಸರ ಭೇಟಿ ನೀಡಿ ಕ್ರೇನ್ ಗಳ ಮೂಲಕ ಅಪಘಾತಕ್ಕೀಡಾದ ವಾಹನಗಳ ತೆರವು ಕಾರ್ಯ ಮಾಡುವ ಮೂಲಕ ಇತರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಮುಂಜಾನೆ ಮಂಜು ಕವಿದ ವಾತಾವರಣವಿದ್ದ ಕಾರಣ ರಸ್ತೆ ಕಾಣದೆ ಅವಘಡ ಸಂಭವಿಸಿದೆ ಎನ್ನಲಾಗಿದೆ.

Edited By : Manjunath H D
PublicNext

PublicNext

30/12/2021 11:55 am

Cinque Terre

36.25 K

Cinque Terre

0

ಸಂಬಂಧಿತ ಸುದ್ದಿ