ಬೆಳ್ಳಂಬೆಳಿಗ್ಗೆ ನಗರದ ಮೈಸೂರು ರಸ್ತೆಯ ಸ್ಯಾಟ್ ಲೈಟ್ ನಿಲ್ದಾಣದ ಬಳಿ ಕ್ಯಾಂಟರ್, ಟೆಂಪೋ, ಬಿಎಂಟಿಸಿ ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತವಾಗಿದೆ. ಬಿಎಂಟಿಸಿ ಹಾಗೂ ಟೆಂಪೋ ನಡುವೆ ಸಿಲುಕಿದ ಆಟೋ ಸಂಪೂರ್ಣ ಜಖಂಗೊಂಡಿದೆ.
ಆಟೋದಲ್ಲಿ ಸಿಲುಕಿದ್ದ ಆಟೋ ಚಾಲಕನನ್ನು ಹರಸಾಹಸ ಪಟ್ಟು ಸ್ಥಳೀಯರು ರಕ್ಷಿಸಿದ್ದಾರೆ. ಅರ್ಧಗಂಟೆಗಳ ಕಾಲ ಹರಸಾಹಸದ ಬಳಿಕ ಆಟೋ ಚಾಲಕನನ್ನು ಹೊರತೆಗೆದ ಸ್ಥಳೀಯರು ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆಯಲ್ಲಿ ಆಟೋ ಚಾಲಕನ ಕಾಲುಗಳು ಮುರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಪಘಾತದಿಂದಾಗಿ ಕೆಲಕಾಲ ಮೈಸೂರು ರಸ್ತೆ ಮೂರು ಕಿಲೋಮೀಟರ್ ಟ್ರಾಫಿಕ್ ಜಾಮ್ ಆಗಿತ್ತು.
Kshetra Samachara
13/06/2022 12:54 pm