ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕಟೀಲ್ ಒಬ್ಬ ವಿದೂಷಕ ಇದ್ದ ಹಾಗೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.
ಜಿಲ್ಲೆಯ ನಾಗನೂರ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಕಟೀಲ್‌ಗೆ ಪಾಪ, ಮೆಚುರಿಟಿ ಇಲ್ಲ ಎಂದರು.
ನಾವು ಅಧಿಕಾರದಲ್ಲಿದ್ದಾಗ ಇವರು ಪ್ರತಿಪಕ್ಷದಲ್ಲಿದ್ದರು.
ಆಗ ಯಾಕೆ ಭ್ರಷ್ಟಾಚಾರದ ಬಗೆಗೆ ಮಾತನಾಡಲಿಲ್ಲ ಆಗ ಇವರ ಬಾಯಲ್ಲೇನು ಕಡಬು ಸಿಕ್ಕಿ ಹಾಕಿಕೊಂಡಿತ್ತಾ...? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ , ನಮ್ಮ ಕಾಲದ್ದೂ ಸೇರಿ ಕಳೆದ 16 ವರ್ಷದ್ದೂ ತನಿಖೆ ಮಾಡಿಸಲಿ ಎಂದರು. ತನಿಖೆ ಬಗೆಗೆ ನಿಮಗೆ ಏಕೆ ಭಯ ಎಂದ ಅವರು ಜನರ ಗಮನ ಸೆಳೆಯಲು ಈ ಆಪಾದನೆ ಮಾಡ್ತಿದ್ದಾರೆ. ಅಧಿವೇಶನದಲ್ಲೇ ಸಿಎಂಗೆ ನ್ಯಾಯಾಂಗ ತನಿಖೆ ಮಾಡಿಸಿ ಎಂದು ಹೇಳಿದೆ, ಅದಕ್ಕೆ ಉತ್ತರ ನೀಡಲಿಲ್ಲ.ಅದನ್ನೆಲ್ಲಾ ಬಿಟ್ಟು ಈಗ ಜಾತಿಗೆ ನಿಂತಿದ್ದಾರೆ ಎಂದರು.
ಜಾತಿಗೂ ಭ್ರಷ್ಟಾಚಾರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ್ ಸಿದ್ದರಾಮಯ್ಯ, ಬೊಮ್ಮಾಯಿ ಈಸ್ ಹೆಡ್ ಆಪ್ ದಿ ಗವರ್ನಮೆಂಟ್. ಸಿಎಂ ಮತ್ತು ಸರ್ಕಾರದ ಮೇಲೆ ಆರೋಪ ಮಾಡ್ತಿದಿವಿ, ಜಾತಿ ಮೇಲಲ್ಲಾ. ಕ್ಷುಲ್ಲಕ ವಿಚಾರ ಜನರ ಮುಂದಿಟ್ಟು ದಾರಿತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಜನ ಬುದ್ಧಿವಂತರಿದ್ದಾರೆ. ಅವರೇ ಇವರಿಗೆ ಬುದ್ದಿ ಕಲಿಸುತ್ತಾರೆ ಎಂದರು.
ಪಿಎಫ್ಐ ಬೆಳೆಸಿದ್ದೇ ಸಿದ್ದರಾಮಯ್ಯ ಎಂದ ಕಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿ ಯಾರೇ ತಪ್ಪಿತಸ್ಥರಿ ದ್ದರೂ ನಾವು ಸಹಾಯ ಮಾಡುವ ಪ್ರಶ್ನೆಯೇ ಇಲ್ಲವೆಂದರು. ನಳೀನ್‌ಕುಮಾರ ಕಟೀಲ್ ಮೇಲೆ ವಾಗ್ದಾಳಿ ಮುಂದುವರಿಸಿದ ಅವರು ನಮ್ಮ ಸರ್ಕಾರಕ್ಕೆ ಮೋದಿ 10 ಪರ್ಸೆಂಟ್ ಅಂತ ಆರೋಪ ಮಾಡಿದ್ದರು. ಅದಕ್ಕೆ ಯಾವ ದಾಖಲೆ ಕೊಟ್ಟಿದ್ದೀರಿ. ಆವಾಗ ಯಾವ ದಾಖಲೆ ನೀಡಿದ್ರು, ಈ ಕಟೀಲ್ ಆಗ ಎಲ್ಲಿದ್ದರು ?. ಆಗ ಯಡಿಯೂರಪ್ಪ ಸಹ ಅಧ್ಯಕ್ಷ ಇದ್ದರು. ಇವರೇ ಮೋದಿ ಕಡೆಯಿಂದ ಹೇಳಿಸಿದ್ದು. ನರೇಂದ್ರ ಮೋದಿ ಕಡೆಯಿಂದ ಹೇಳಿಸಿದವರೇ ಇವರು ಎಂದು ದೂರಿದರು.
ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಎಸಿಬಿ ರದ್ದು ಮಾಡ್ತಿನಿ ಅಂತಾ ಹೇಳಿದ್ದ ಬಿಜೆಪಿವರು ರದ್ದು ಮಾಡಿದರಾ ಎಂದು ಸಿದ್ದರಾಮಯ್ಯ , ಎಸಿಬಿ ರದ್ದು ಮಾಡಿದ್ದು ಕೋರ್ಟು, ಇವರಲ್ಲಾ ಎಸಿಬಿ ರದ್ದು ಮಾಡಿದ್ದು .ಲೋಕಾಯುಕ್ತರ ಬಗ್ಗೆ ಇವರಿಗೆ ಮಾತನಾಡಲು ಯಾವ ನೈತಿಕತೆ ಇದೆ. ಹಿಂದೆ ಲೋಕಾಯುಕ್ತ ಅಧಿಕಾರಿ ಮಗಾ ಲೋಕಾಯುಕ್ತನ ಮನೆಯಲ್ಲೆ ಲಂಚ ತಗೋಳ್ತಿದ್ದಾ. ಅದಕ್ಕಾಗಿ ನಾನು ಎಸಿಬಿಗೆ ಹೆಚ್ಚು ಪವರ್ ಕೊಟ್ಟಿದ್ದು ನಿಜ ಎಂದರು.
PublicNext
27/09/2022 04:15 pm