ರಬಕವಿ-ಬನಹಟ್ಟಿ: ಬನಹಟ್ಟಿ ನಗರದ ಕೆಎಚ್‌ಡಿಸಿ ನೇಕಾರರು ಬಾಂಗಿ ವೃತ್ತದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಸೋಮವಾರ 13ನೇ ದಿನಕ್ಕೆ ಕಾಲಿಟ್ಟಿದೆ.
ಕೈಮಗ್ಗ ನಿಗಮದ ನೇಕಾರರು ತಮ್ಮ ಬೇಡಿಕೆಗಳಿಗಾಗಿ ನಡೆದು ಬಂದ ಹೋರಾಟದ 12ದಿನಗಳ ವೇದಿಕೆಗೆ ಶಾಸಕರು ಭೇಟಿ ನೀಡಿಲ್ಲ. ಹೀಗಾಗಿ ಸೋಮವಾರ ಶಾಸಕರ ಕಚೇರಿಗೆ ಮುತ್ತಿಗೆ ಹಾಕುವ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ, ಒಂದು ಗಂಟೆಗೂ ಅಧಿಕ ಕಾಲ ಪೊಲೀಸರು ಮತ್ತು ನೇಕಾರರ ಮುಖಂಡರ ನಡುವೆ ಮಾತುಕತೆ ನಡೆದು ಕೊನೆಗೂ ಶಾಸಕರ ಕಚೇರಿಯಲ್ಲಿ ನೇಕಾರರಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಯಿತು.
ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಸೇರಿ ನೇಕಾರರು ತಮ್ಮ ಬೇಡಿಕೆಗಳನ್ನು ಶಾಸಕರ ಮುಂದೆ ಇಟ್ಟರು.
ಮಾತಿಗೆ ಮಾತು ಬೆಳೆದು, ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ನೀನು ಕಳೆದ ಚುನಾವಣೆಯಲ್ಲಿ ಸಚಿವ ಶಿವಾನಂದ ಪಾಟೀಲ ಪರ ಪ್ರಚಾರ ಮಾಡಿದ್ದಿ ಎಂದು ಆರೋಪಿಸುತ್ತಿದ್ದಂತೆ ಶಿವಲಿಂಗ ಟಿರಕಿ ನಾನು ಯಾವುದೇ ಪಕ್ಷದ ಪರ ಕೆಲಸ ಮಾಡಿಲ್ಲ. ಅದಕ್ಕೆ ಯಾವುದೇ ದೇವರ ಮುಂದೆ ಪ್ರಮಾಣ ಮಾಡ್ತೀನಿ. ನೀವೂ ನನ್ನ ತಲೆಯ ಮೇಲೆ ಕೈಇಟ್ಟು ಪ್ರಮಾಣ ಮಾಡುವಂತೆ ಜಟಾಪಟಿ ನಡೆಯಿತು.
ಇದೆ ಸಂದರ್ಭದಲ್ಲಿ ವಿಡಿಯೋ ಮಾಡುತ್ತಿದ್ದ ವರದಿಗಾರರಿಗೂ ವಿಡಿಯೋ ಬಂದ್ ಮಾಡುವಂತೆ ಶಾಸಕರು ಆವಾಜ ಹಾಕಿದ ಘಟನೆ ನಡೆಯಿತು.
ಕೊನೆಗೆ ಪೊಲೀಸರು ಮದ್ಯಪ್ರವೇಶಿಸಿ, ವಾತಾವರಣ ತಿಳಿಗೊಳಿಸಿದ ನಂತರ ತಮ್ಮ ಸಮಸ್ಯೆಯನ್ನು ಅಧಿವೇಶನದಲ್ಲಿ ಧ್ವನಿಎತ್ತಲಾಗುವುದು ಎಂದು ಶಾಸಕರು ತಿಳಿಸಿದರು.
PublicNext
02/12/2024 07:05 pm