ಬಾಗಲಕೋಟೆ: ಲೋಕಾಯುಕ್ತ ಇದ್ದರೆ ಎಂದೋ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್ ಕಿಡಿಕರಿದ್ದಾರೆ. ಜಿಲ್ಲೆಯ ಇಳಕಲ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಕಾಂಗ್ರೆಸ್ಸಿಗರು ತಮ್ಮ ಅಧಿಕಾರವಧಿಯಲ್ಲಿ ಭ್ರಷ್ಟಾಚಾರ ಮುಚ್ಚಿಹಾಕಲು ಲೋಕಾಯುಕ್ತವನ್ನೇ ಮುಗಿಸಿದವರು.
ಇಲ್ಲದಿದ್ದರೆ ಸಿದ್ದರಾಮಯ್ಯ ಆಗಲೇ ಜೈಲಿಗೆ ಹೋಗುತ್ತಿದ್ದರು ಎಂದರು. ಇವತ್ತು ನಾವು ಲೋಕಾಯುಕ್ತವನ್ನ ಪುನಃ ಓಪನ್ ಮಾಡಿದ್ದೇವೆ. 40 ಪರ್ಸೆಂಟ್ ಎನ್ನುವವರು ಪೂರ್ಣ ದಾಖಲೆ ಪಡೆದು ಲೋಕಾಯುಕ್ತಕ್ಕೆ ಹೋಗಿ. ಸುಳ್ಳು ಹೇಳಿ ಯಾವುದಕ್ಕೂ ದಾಖಲೆ ಕೊಡ್ತಿಲ್ಲ ಎಂದರು.
ಕಾಂಗ್ರೆಸ್ ಪೇ ಸಿಎಂ ಅಭಿಯಾನ ವಿಚಾರ ಪ್ರಸ್ತಾಪಿಸಿದ ಅವರು ಮುಖ್ಯಮಂತ್ರಿಗಳ ಬಗ್ಗೆ ಒಂದು ಉದಾಹರಣೆ ಕೊಡಿ ನೋಡೋಣ.
ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಒಂದು ಗೌರವ ಇದೆ. ಏಕೆ ಸುಳ್ಳು ಹೇಳ್ತೀರಿ ಎಂದು ಪ್ರಶ್ನಿಸಿದರು. ಸಿಎಂ ಸ್ಥಾನಕ್ಕಿರುವ ಮೌಲ್ಯವನ್ನು ಕಾಂಗ್ರೆಸ್ ಅಪವಿತ್ರ ಮಾಡುತ್ತಿದೆ. ಸಿದ್ರಾಮಣ್ಣನ ಹಗರಣ ಬಹಳ ಇತ್ತು, ಈಗ ಅದನ್ನ ನಾವು ತೆಗೆಯುತ್ತೇವೆ. ಅವರು ಸಿಎಂ ಇದ್ದಾಗ ದಾಖಲೆ ಕದ್ದು ಒಳಗಡೆ ಮುಚ್ಚಿ ಇಟ್ಟಿದ್ದರು. ಹೀಗಾಗಿ ದಾಖಲೆ ಹುಡುಕುವುದು ನಮಗೆ ಕಷ್ಟವಾಗಿದೆ. ಅರ್ಕಾವತಿ, ಹಾಸ್ಟೆಲ್ ದಿಂಬು, ಮೊಟ್ಟೆ ಹೀಗೆ ಎಲ್ಲದರಲ್ಲೂ ಹಗರಣ ಮಾಡಿದ್ದಾರೆ ಎಂದರು.
Kshetra Samachara
26/09/2022 04:04 pm