ಮೇಷ:ಆರಂಭಿಸಿದ ಕೆಲಸವನ್ನು ಮುಗಿಸಲು ಅವಸರ ಇರಲಿ. ಇದೇ ವೇಳೆ ಕೆಲವರು ತೊಂದರೆಯನ್ನು ತಂದೊಡ್ಡಿಯಾರು. ಜಾಣರಾಗಿರಿ.
ವೃಷಭ:ಯಾರ ಬಗ್ಗೆಯೂ ಅತಿಯಾದ ನಂಬಿಕೆ ಬೇಡ. ಇದರಿಂದಾಗಿ ನಿಮ್ಮ ಪಾಲಿಗೆ ನೋವುಗಳ ಅನುಭವವೇ ಹೆಚ್ಚಾಗಬಹುದು.
ಮಿಥುನ: ನಿಮ್ಮ ಭೇಟಿಗೆ ಬರುವ ಬಂಧುಬಾಂಧವರು ತಲೆನೋವನ್ನು ತರುವಂತಹ ಸಾಧ್ಯತೆಗಳಿವೆ. ಮೌನವಾಗಿರುವುದೇ ಉತ್ತಮ.
ಕಟಕ: ಲಕ್ಷ್ಮೀನರಸಿಂಹನ ಸ್ಮರಣೆ ಮಾಡಿಯೇ ಕಾರ್ಯಾರಂಭ ಮಾಡಿ. ಇಚ್ಛಿಸಿದ ಕಾರ್ಯಗಳೆಲ್ಲ ಬಹು ಬೇಗನೆ ಸಿದ್ಧಿಯಾಗಲಿವೆ.
ಸಿಂಹ: ಉದ್ವೇಗದಿಂದಾಗಿ ತೊಳಲಾಟಗಳೇ ಜಾಸ್ತಿ ಆಗಬಹುದು. ದಾರಿ ತಪ್ಪದಿರಿ. ಸಂಜೆಯ ವೇಳೆಗೆ ನಿರಾಳತೆ ಹೊಂದುವಿರಿ.
ಕನ್ಯಾ: ಅಮೂಲ್ಯ ವಸ್ತ್ರಾಭರಣಗಳ ಬಗ್ಗೆ ಎಚ್ಚರ ಇರಲಿ. ನಿರ್ಲಕ್ಷ್ಯಂದ ಕೆಲವು ಬಗೆಯ ಹಾನಿಗಳು ಸಂಭವಿಸುವ ಸಾಧ್ಯತೆಗಳಿವೆ.
ತುಲಾ: ಹಳೆಯ ನೋವುಗಳನ್ನೇ ಮತ್ತೆ ಮತ್ತೆ ನೆನಪಿಸಿಕೊಳ್ಳಬೇಡಿ. ಆ ಅನುಭವಗಳೇ ಜೀವನದ ಪಾಠಗಳಾಗಲಿವೆ.
ವೃಶ್ಚಿಕ: ಮಾತ್ಸರ್ಯದಿಂದ ತುಂಬಿರುವ ಜನ ನಿಮ್ಮ ಮನಃಶಾಂತಿಯನ್ನು ಕಲಕಲು ಪ್ರಯತ್ನಿಸುತ್ತಾರೆ. ಮನಸ್ಸು ದೃಢವಾಗಿರಲಿ.
ಧನಸ್ಸು: ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬುದನ್ನು ತಿಳಿದೂ ಮತ್ತೆ ಹಳೆಯ ತಪ್ಪನ್ನೇ ಮಾಡಬೇಡಿ. ಜಾಗ್ರತೆಯಿಂದ ಇದ್ದರೆ ಕ್ಷೇಮ
ಮಕರ: ಹೊಸ ಹೊಸ ಆಲೋಚನೆಗಳು ರೋಮಾಂಚನ ಉಂಟುಮಾಡಬಹುದು. ಆದರೆ ತಾರ್ಕಿಕವಾಗಿ ಚಿಂತಿಸಿ ಮುನ್ನಡೆದರೆ ಉತ್ತಮ.
ಕುಂಭ: ಪರಿಶ್ರಮ ಹಾಗೂ ಕಾರ್ಯದಕ್ಷತೆಗಳಿಂದಾಗಿ ಕಚೇರಿಯಲ್ಲಿ ಹಿರಿಯರ ಪ್ರಶಂಸೆ ಪಡೆಯುವಿರಿ. ಪದೋನ್ನತಿ ಲಭ್ಯವಾಗಲಿದೆ.
ಮೀನ: ಆಧ್ಯಾತ್ಮಿಕ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಲೌಕಿಕ ಜೀವನವನ್ನು ಮರೆಯದಿರಿ. ಏಕೆಂದರೆ ಸಮರಸವೇ ಜೀವನ.
PublicNext
25/09/2020 08:47 am