ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: ಬುಧವಾರ 22 ಜನವರಿ 2025

ಮೇಷ ರಾಶಿ

ನಿಮ್ಮ ಉದ್ದೇಶಗಳು ಅರ್ಥಪೂರ್ಣವಾಗಿರುತ್ತದೆ. ಆದರೆ, ನಿಮ್ಮ ಕಾರ್ಯಾಚರಣೆ ಶೈಲಿ ಉದ್ಯೋಗ ರಂಗದಲ್ಲಿ ಕೆಲವರನ್ನು ಕೆರಳಿಸಬಹುದು. ಸುತ್ತಮುತ್ತಲಿನ ಜನರು ವಿಭಿನ್ನ ಗ್ರಹಿಕೆಯನ್ನು ಹೊಂದಿರುತ್ತಾರೆ, ಈ ಬಗ್ಗೆ ನಿಗಾವಹಿಸಿ, ಇಲ್ಲವೇ ತೊಂದರೆಗೆ ಸಿಲುಕಬಹುದು.

ವೃಷಭ ರಾಶಿ

ಮನೆಯ ಕೆಲಸಗಳನ್ನು ನಿರ್ವಹಿಸಲು ನೀವು ಸೋದರ ಸಂಬಂಧಿ ಅಥವಾ ಒಡಹುಟ್ಟಿದವರ ಮೇಲೆ ಹೆಚ್ಚು ಅವಲಂಬಿತರಾಗಬಹುದು. ಕೆಲಸ ಸ್ಥಳದಲ್ಲಿಯೂ ಬೇರೆಯವರ ಸಹಾಯವಿಲ್ಲದೆ ನಿಮ್ಮ ಕೆಲಸ ಪೂರ್ಣಗೊಳ್ಳುವುದಿಲ್ಲ. ಹೀಗೆ ಎಲ್ಲಾದಕ್ಕೂ ಬೇರೆಯವರನ್ನು ಅವಲಂಬಿಸುವುದನ್ನು ತಪ್ಪಿಸಿ.

ಮಿಥುನ ರಾಶಿ

ನಿಮ್ಮ ಮೌಲ್ಯವನ್ನು ಹೆಚ್ಚಿಸಲು ಸ್ನೇಹಿತರು ಆಸಕ್ತಿ ಒಂದಿರಬಹುದು. ನಿಮ್ಮ ಇಮೇಜ್ ಹೆಚ್ಚಿಸಲು ಅವರ ಪ್ರಯತ್ನವು ನಿಮ್ಮನ್ನು ಇನ್ನಷ್ಟು ಒಳ್ಳೆ ಕೆಲಸ ಮಾಡುವಂತೆ ಹುರಿದುಂಬಿಸುತ್ತದೆ. ಮುಂದಿನ ದಿನಗಳಲ್ಲಿ ಇದು ನಿಮ್ಮನ್ನು ನೀವು ಊಹಿಸಲಾರದ ಎತ್ತರಕ್ಕೆ ಕರೆದೊಯ್ಯುತ್ತದೆ.

ಕರ್ಕಾಟಕ ರಾಶಿ

ದೊಡ್ಡ ದೊಡ್ಡ ಗುರಿ ಹೊಂದಿರುವ ನೀವು ಅವುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಮಾನವ ಸಂಪನ್ಮೂಲವನ್ನು ಕ್ರೋಢೀಕರಿಸುವತ್ತ ಗಮನ ಹರಿಸಿ. ಯಾವುದಾದರೂ ಪ್ರಮುಖ ವಿಚಾರಗಳಲ್ಲಿ ಆತುರದ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ.

ಸಿಂಹ ರಾಶಿ

ನಿಮ್ಮ ಕಲ್ಪನೆಗಳು ಭಾಗಶಃ ತಪ್ಪು ದಾರಿಗೆಳೆಯಬಹುದು. ಆದರೆ, ತರ್ಕದ ಮೂಲಕ ನಿಮ್ಮ ಭಾವನೆಗಳನ್ನೂ ಸಮತೋಲನಗೊಳಿಸಿ. ಇಂದು ಕೈಗೊಳ್ಳುವ ಆತುರದ ನಿರ್ಧಾರಗಳು ನಿಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಬಹುದು. ಹಾಗಾಗಿ ತುಂಬಾ ಎಚ್ಚರಿಕೆಯಿಂದ ಇರಿ.

ಕನ್ಯಾ ರಾಶಿ

ಸೃಜನಾತ್ಮಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ಹೆಚ್ಚು ಅವಕಾಶಗಳು ದೊರೆಯಬಹುದು. ನಿಮ್ಮ ಹಾದಿಯಲ್ಲಿ ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ದಿಢೀರ್ ಧನಲಾಭದ ಅವಕಾಶವಿದ್ದು, ವಿತ್ತೀಯ ಸ್ಥಿತಿ ಸುಧಾರಿಸಲಿದೆ.

ತುಲಾ ರಾಶಿ

ಹೊಸ ವಿಷಯಗಳನ್ನು ಕಲಿಯಲು ಉತ್ಸಾಹದಿಂದ ನಿಮ್ಮ ದಿನವನ್ನು ಆರಂಭಿಸುವಿರಿ. ಹೊಸ ಜನರ ಭೇಟಿಯು ಭವಿಷ್ಯದಲ್ಲಿ ಹೆಚ್ಚು ಪ್ರಯೋಜನಕಾರಿ ಆಗಿದೆ. ಸಕಾರಾತ್ಮಕ ಮನೋಭಾವದಿಂದ ಮುಂದುವರೆಯುವುದರಿದ್ನ ಲಾಭ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗಲಿದೆ.

ವೃಶ್ಚಿಕ ರಾಶಿ

ವೃತ್ತಿ ಬದುಕಿನಲ್ಲಿ ನಿಮಗಾಗಿ ಬೇಡಿಕೆ ಖಚಿತಪಡಿಸಿಕೊಳ್ಳಲು ಶ್ರದ್ದೆಯಿಂದ ಕಾರ್ಯನಿರ್ವಹಿಸುವುದರ ಜೊತೆಗೆ ತಾಳ್ಮೆಯನ್ನು ಕಾಪಾಡಿಕೊಳ್ಳಿ. ನಿಷ್ಠುರತೆಯೂ ನಿಮ್ಮನ್ನು ನಿಮ್ಮ ಬುದ್ದಿವಂತಿಕೆಯನ್ನು ಮರೆಮಾಡಬಹುದು. ಹಾಗಾಗಿ, ಬೇರೆಯವರೊಂದಿಗೆ ಮಾತನಾಡುವಾಗ ಮಧುರತೆಯನ್ನು ಕಾಪಾಡಿಕೊಳ್ಳಿ.

ಧನು ರಾಶಿ

ಯಾರನ್ನೇ ಆದರೂ ಕುರುಡಾಗಿ ನಂಬುವ ತಪ್ಪನ್ನು ಮಾಡಬೇಡಿ. ನಿಮ್ಮ ಸಾಮರ್ಥ್ಯಕ್ಕೂ ಮೀರಿದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉತ್ತಮ ಮಾರ್ಗದರ್ಶನ ದೊರೆಯಲಿದೆ. ವೈಫಲ್ಯದ ಬಗ್ಗೆ ಚಿಂತಿಸದೆ ಧೈರ್ಯವಾಗಿ ಮುನ್ನಡೆಯುವುದರಿಂದ ಯಶಸ್ಸು ಹಿಂಬಾಲಿಸಲಿದೆ.

ಮಕರ ರಾಶಿ

ಗುರು-ಶನಿ ಪ್ರಭಾವದಿಂದ ಸಂವಹನ ವಲಯದಲ್ಲಿ ಅಗಾಧವಾದ ಯಶಸ್ಸನ್ನು ಸಾಧಿಸುವಿರಿ. ಗುರಿಯತ್ತ ಗಮನಹರಿಸಿ ಮುಂದುವರೆಯುವುದರಿಂದ ನಿರೀಕ್ಷಿತ ಫಲ ಪಡೆಯಬಹುದು. ತಂತ್ರಜ್ಞಾನಕ್ಕೆ ತಕ್ಕಂತೆ ನಿಮ್ಮನ್ನು ನೀವು ಅಪ್ಡೇಟ್ ಮಾಡಿಕೊಳ್ಳುವುದು ಒಳ್ಳೆಯದು.

ಕುಂಭ ರಾಶಿ

ಉದ್ಯೋಗದಲ್ಲಿ ನಿಮ್ಮ ಸ್ಥಾನಮಾನ ಕಳೆದುಕೊಳ್ಳುವ ಭೀತಿ ಇರುತ್ತದೆ. ಯಾವುದೇ ಆಧಾರವಿಲ್ಲದ ನಿಮ್ಮ ಈ ಕಲ್ಪನೆಯಿಂದ ಹೊರಬನ್ನಿ. ನಿಮಗೆ ಹೊಸ ಜವಾಬ್ದಾರಿ ಹೆಗಲೇರಬಹುದು. ಶಕ್ತಿಯ ಹೊಸ ಅಲೆಯಿಂದ ನಿಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುವಿರಿ.

ಮೀನ ರಾಶಿ

ಕೆಲಸದ ಸ್ಥಳದಲ್ಲಿ ತುಂಬಾ ಭಾವನಾತ್ಮಕವಾಗಿ ಇರುವುದನ್ನು ತಪ್ಪಿಸಿ. ಇತ್ತೀಚೆಗೆ ಅನುಭವಿಸಿದ ಅವಮಾನದ ಬಗ್ಗೆ ಯೋಚಿಸುವ ಬದಲಿಗೆ ಅವಮಾನ ಮಾಡಿದವರ ಮುಂದೆ ಮುಗಿಲೆತ್ತರಕ್ಕೆ ಬೆಳೆದು ತೋರಿಸಲು ಪ್ರಯತ್ನಿಸಿ. ಇದಕ್ಕಾಗಿ ಕೆಲವು ಸ್ಪೂರ್ತಿದಾಯಕ ಪುಸ್ತಕಗಳನ್ನು ಓದಿ.

Edited By : Nagaraj Tulugeri
PublicNext

PublicNext

22/01/2025 09:02 am

Cinque Terre

30.4 K

Cinque Terre

0