ಮೇಷ: ಸಹಕಾರಿ ಬ್ಯಾಂಕಿನಿಂದ ಸಹಾಯ. ಹೃದಯ ಸಂಬಂಧಿ ಸಮಸ್ಯೆ ಬಾಧಿಸೀತು. ಸಾರ್ವಜನಿಕ ಅವಮಾನ, ಮಾನಸಿಕ ನೋವು.
ವೃಷಭ: ಅಂತಿಮ ಹಂತದ ಗೃಹಾಲಂಕಾರಕ್ಕೆ ಖರ್ಚು. ಮಿತ್ರರೊಂದಿಗೆ ಮೋಜು. ಪತ್ರ ವ್ಯವಹಾರ ಸುಲಲಿತ. ನೆರೆಯವರಿಂದ ಅನುಕೂಲ.
ಮಿಥುನ: ಆರ್ಥಿಕ ಸಮಸ್ಯೆಯಿಂದ ಮುಕ್ತಿ ದೊರೆತು ನೆಮ್ಮದಿ. ಸ್ವಂತ ವ್ಯವಹಾರದಲ್ಲಿ ಪ್ರಗತಿಯಿದೆ. ಮಿತ್ರರಿಂದ ಉದ್ಯೋಗದಲ್ಲಿ ಲಾಭ.
ಕಟಕ: ಪ್ರವಾಸದಲ್ಲಿ ಅನಿರೀಕ್ಷಿತ ಅಧಿಕ ಪ್ರಮಾಣದ ಖರ್ಚು ಆಗಲಿದೆ. ಖಾಸಗಿ ಉದ್ಯೋಗಿಗಳಿಗೆ ಉದ್ಯೋಗ ನಷ್ಟ ಸಂಭವಿಸಬಹುದು.
ಸಿಂಹ: ಪ್ರಯಾಣದಲ್ಲಿ ವಸ್ತು ಕಳವು. ತಂದೆ ಮಕ್ಕಳಲ್ಲಿ ಮನಸ್ತಾಪ. ಸಾರ್ವಜನಿಕ ಬದುಕಲ್ಲಿ ಅಪಮಾನ. ರಾಜಕಾರಣಿಗಳ ಗೌರವಕ್ಕೆ ಧಕ್ಕೆ.
ಕನ್ಯಾ: ಅನಿರೀಕ್ಷಿತವಾಗಿ ಸ್ನೇಹಿತರ ಭೇಟಿ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಅನುಭವಿಸುವಿರಿ. ಪಾಲುದಾರಿಕೆಯಲ್ಲಿ ಅನುಕೂಲಕರ ಸ್ಥಿತಿ.
ತುಲಾ: ಮಹಿಳಾ ಸಹೋದ್ಯೋಗಿಗಳಿಂದ ಸಹಾಯ. ದಾಂಪತ್ಯದಲ್ಲಿ ವೈಮನಸ್ಸು. ಭವಿಷ್ಯದ ಚಿಂತೆ. ಅಧ್ಯಾತ್ಮದತ್ತ ವಿಶೇಷ ಒಲವು.
ವೃಶ್ಚಿಕ: ಋಣಬಾಧೆಯಿಂದ ಮುಕ್ತಿ. ಉದ್ಯೋಗದಲ್ಲಿ ಒತ್ತಡ. ಸೌಂದರ್ಯವರ್ಧಕ ಖರೀದಿ. ಆಟೋಮೊಬೈಲ್ಸ್ ವ್ಯವಹಾರದಲ್ಲಿ ನಷ್ಟ.
ಧನಸ್ಸು: ಸಾಲದ ಚಿಂತೆ. ಸ್ಥಿರಾಸ್ತಿ, ವಾಹನದ ಮೇಲೆ ಸಾಲ ಮಾಡುವಿರಿ. ಉದ್ಯೋಗ ಸ್ಥಳದಲ್ಲಿ ಪ್ರಶಂಸೆ. ತಂದೆಯಿಂದ ಹಣದ ಸಹಾಯ.
ಮಕರ: ಪಾಲುದಾರಿಕೆಯಲ್ಲಿ ಮನಸ್ತಾಪ ಉಂಟಾಗಬಹುದು. ಪ್ರಯಾಣದಲ್ಲಿ ಅಡೆತಡೆ. ಉದ್ಯೋಗ ಬದಲಾವಣೆಯಿಂದ ಸಮಸ್ಯೆ.
ಕುಂಭ: ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ. ದಾಂಪತ್ಯದಲ್ಲಿ ವಿರಸ. ಸ್ನೇಹಿತರಿಂದ ನೆರವು. ದಿನಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ.
ಮೀನ: ಹಣ ಹೂಡಿಕೆ ಮಾಡುವಾಗ ಯೋಚಿಸಿ ನಿರ್ಧರಿಸಿ. ಸಾರ್ವಜನಿಕವಾಗಿ ಗೌರವ, ಮನ್ನಣೆ ಸಿಗಲಿದೆ. ವಕೀಲ ವೃತ್ತಿಯವರಿಗೆ ಪ್ರಗತಿ.
PublicNext
19/01/2025 07:34 am