ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 21.11.2024

ಮೇಷ: ಕೃಷಿಯಿಂದ ಹೆಚ್ಚು ಆದಾಯ ಬರಲಿದೆ. ಆತ್ಮವಿಶ್ವಾಸದ ಕೊರತೆ. ಕಚೇರಿಯ ಕೆಲಸಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ.

ವೃಷಭ: ನಾಯಕತ್ವದ ಸ್ಥಾನ ನಿಮ್ಮೆಡೆಗೆ ಸಾಗಿಬರಲಿದೆ. ಅನಿರೀಕ್ಷಿತ ಧನಲಾಭ, ಕಷ್ಟ ನಿವಾರಣೆ. ಇಷ್ಟ ದೇವರನ್ನು ಭಕ್ತಿಯಿಂದ ಪೂಜಿಸಿ.

ಮಿಥುನ: ಜವಾಬ್ದಾರಿಗಳನ್ನು ಜಾಣ್ಮೆಯಿಂದ ನಿಭಾಯಿಸಿ. ಮುದ್ರಣ ಉದ್ಯಮಿಗಳಿಗೆ ಧನ ಲಾಭ. ಮಕ್ಕಳ ಬಗ್ಗೆ ವಿಶೇಷ ಗಮನಹರಿಸಿ.

ಕಟಕ: ಸಾಹಿತ್ಯ, ಸಂಗೀತ ಶಾಸ್ತ್ರಜ್ಞರಿಗೆ ಗೌರವ. ಸರ್ಕಾರಿ ನೌಕರರಿಗೆ ಒತ್ತಡ. ಹಿತಶತ್ರುಗಳ ಕಾಟವನ್ನು ಜಾಣನಡೆಯಿಂದ ನಿವಾರಿಸಿ.

ಸಿಂಹ: ಕಲಾವಿದರಿಗೆ ಜನಪ್ರಿಯತೆ ಹೆಚ್ಚಾಗಲಿದೆ. ಅನಿರೀಕ್ಷಿತ ಬದಲಾವಣೆಗಳು ಕಂಡು ಬರುತ್ತವೆ. ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ.

ಕನ್ಯಾ: ಕೃಷಿಕರಿಗೆ ಶುಭದಾಯಕ ದಿನ. ದ್ರವರೂಪದ ಉತ್ಪನ್ನ ಉತ್ಪಾದನೆ ಮಾಡುವವರಿಗೆ ನಿರೀಕ್ಷಿತ ಲಾಭ. ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ.

ತುಲಾ: ವಿದ್ಯಾರ್ಥಿಗಳಿಗೆ ಶುಭಕಾರಕ ದಿನ. ವೃತ್ತಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಜಾಸ್ತಿ ಇದೆ. ಕೌಟುಂಬಿಕ ವಿಚಾರದಲ್ಲಿ ಪ್ರಗತಿ.

ವೃಶ್ಚಿಕ: ಖರ್ಚಿನಲ್ಲಿ ಹಿಡಿತ ಸಾಧಿಸುವುದು ಅನಿವಾರ್ಯ. ನಿಮ್ಮ ಸಾಧನೆಗೆ ಅಧಿಕಾರಿಗಳಿಂದ ಪ್ರೋತ್ಸಾಹ. ಉತ್ತಮ ಆರೋಗ್ಯವಿರುತ್ತದೆ.

ಧನಸ್ಸು: ಲೆಕ್ಕ ಪರಿಶೋಧಕರಿಗೆ ಧನಲಾಭ. ಕಾನೂನು ಮತ್ತು ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭ. ಸಹೋದ್ಯೋಗಿಳೊಂದಿಗೆ ಬಾಂಧವ್ಯ ವೃದ್ಧಿ.

ಮಕರ: ಕೊನೆಗೂ ವಿವಾಹ ಯೋಗ ಕೂಡಿ ಬರುವುದು. ಹಣದ ನಿರ್ವಹಣೆಯಲ್ಲಿ ಯಶಸ್ಸು. ಒಡಹುಟ್ಟಿದ ವರಿಗೆ ಸಹಾಯ ಮಾಡುವಿರಿ.

ಕುಂಭ: ಉದ್ಯೋಗದಲ್ಲಿ ಇರುವವರು ಎಚ್ಚರಿಕೆ ವಹಿಸುವುದು ಅಪೇಕ್ಷಣೀಯ. ಖರ್ಚು ವೆಚ್ಚದಲ್ಲಿ ಹಿಡಿತವಿರಲಿ. ಭೂಮಿಯ ಲಾಭವಿದೆ.

ಮೀನ: ಭೂ ವ್ಯವಹಾರಗಳಲ್ಲಿ, ಧಾರ್ವಿುಕ ವಿಷಯಗಳಲ್ಲಿ ಹೆಚ್ಚಿನ ಒಲವು ತೋರಿಸುವಿರಿ. ರಾಜಕೀಯ ವ್ಯಕ್ತಿಗಳಿಗೆ ಶುಭಕಾರಕ ದಿನವಲ್ಲ.

Edited By : Nirmala Aralikatti
PublicNext

PublicNext

21/11/2024 07:33 am

Cinque Terre

17.69 K

Cinque Terre

0