ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 18-11-2024

ಮೇಷ: ತೊಂದರೆಗಳೇನಿದ್ದರೂ ತಾತ್ಕಾಲಿಕ, ಹಣಕಾಸಿನ ಸ್ಥಿತಿ ಉತ್ತಮ, ಹಿರಿಯರ ಸಲಹೆಗಳನ್ನು ಸ್ವೀಕರಿಸಿ.

ವೃಷಭ: ಆಸ್ತಿ ವಿಚಾರದಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆಗಳು, ರಸಗೊಬ್ಬರ ವ್ಯಾಪಾರಿಗಳಿಗೆ ಶುಭ ಸೂಚನೆ.

ಮಿಥುನ: ನೆರೆಹೊರೆಯವರೊಂದಿಗೆ ಎಚ್ಚರ, ಜಲಸಂಬಂಧಿ ಕೆಲಸಗಾರರಿಗೆ ಆದಾಯ, ತೀರ್ಥಕ್ಷೇತ್ರ ದರ್ಶನ ಯೋಗ.

ಕರ್ಕಾಟಕ: ಯಂತ್ರೋಪಕರಣಗಳಿಂದ ತೊಂದರೆ, ದೃಢವಾದ ನಡೆಯಿಂದ ಗೆಲುವು, ಕ್ರೀಡಾಪಟುಗಳಿಗೆ ಯಶಸ್ಸು.

ಸಿಂಹ: ಮಾತಿನಲ್ಲಿ ಜಾಗ್ರತೆ ಇರಲಿ, ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು, ಕಾರ್ಯರಂಗದ ವಿಸ್ತರಣೆಗೆ ಒಳ್ಳೆಯ ಸಮಯ

ಕನ್ಯಾ: ಗುರುಸಮಾನ ವ್ಯಕ್ತಿಯಿಂದ ಮಾರ್ಗದರ್ಶನ, ನೈಸರ್ಗಿಕ ಕೃಷಿಯಲ್ಲಿ ಆಸಕ್ತಿ, ಗೌರವ, ಹೆಸರು, ಕೀರ್ತಿ ಗಳಿಸುವ ಪ್ರಯತ್ನ.

ತುಲಾ: ಶತ್ರುಗಳ ಕಾಟದಿಂದ ಮುಕ್ತಿ, ಕುಟುಂಬದ ಆರೋಗ್ಯದಲ್ಲಿ ಸುಧಾರಣೆ, ಮೋಜು ಮಸ್ತಿಯಲ್ಲಿ ಕಾಲಹರಣ.

ವೃಶ್ಚಿಕ: ಸಾಹಸ ಕಾರ್ಯಗಳಲ್ಲಿ ಜಯಶೀಲತೆ, ಶೀತ ಮತ್ತು ಕೆಮ್ಮಿನಿಂದ ಅಸ್ವಸ್ಥತೆ, ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ.

ಧನಸ್ಸು: ಮಾತಿನಲ್ಲಿ ಮೃದುತ್ವವಿರಲಿ, ಗೊಂದಲದ ವಾತಾವರಣ, ದಾಂಪತ್ಯದಲ್ಲಿ ಕಲಹ ಮತ್ತು ನೋವು.

ಮಕರ: ಅಮೂಲ್ಯ ವಸ್ತುಗಳು ಕಳೆದುಹೋಗುವ ಸಾಧ್ಯತೆ, ಮಾತಿನಿಂದ ಕಾರ್ಯ ಸಾಧನೆ, ವೃತ್ತಿಜೀವನದಲ್ಲಿ ಮುನ್ನಡೆ.

ಕುಂಭ: ಕಲಾವಿದರಿಗೆ ಉತ್ತಮ ದಿನ, ಬುದ್ಧಿವಂತಿಕೆಯ ನಿರ್ಧಾರಗಳು ಅಗತ್ಯ, ಮಹಿಳೆಯರ ಆರೋಗ್ಯದಲ್ಲಿ ಕ್ಷೀಣತೆ

ಮೀನ: ಕಾನೂನು ತೊಂದರೆಗಳಿಂದಾಗಿ ಸಮಸ್ಯೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು, ಕಠಿಣ ಪರಿಶ್ರಮದಿಂದ ಲಾಭ.

Edited By : Abhishek Kamoji
PublicNext

PublicNext

18/11/2024 07:09 am

Cinque Terre

21.25 K

Cinque Terre

0