ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 17.11.2024

ಮೇಷ: ಮನಸ್ಸಿನಲ್ಲಿ ಸಂತಸ ಇರುತ್ತದೆ. ಪೋಷಕರ ಆರೋಗ್ಯದತ್ತ ಕಾಳಜಿವಹಿಸಿ. ಹೊಸದನ್ನು ಕಲಿಯುವ ಅವಕಾಶವಿರುತ್ತದೆ.

ವೃಷಭ: ಮಕ್ಕಳಿಂದ ಶುಭವಾರ್ತೆ. ಶಿಕ್ಷಣ ಕ್ಷೇತ್ರದವರಿಗೆ ಉತ್ತಮ ಸಮಯ. ಆರೋಗ್ಯದ ವಿಚಾರದಲ್ಲಿ ಸೂಕ್ತ ಮುನ್ನೆಚ್ಚರ ಅಗತ್ಯ.

ಮಿಥುನ: ಕೋರ್ಟ್ ಕೆಲಸದಲ್ಲಿ ಜಯ. ಕೃಷಿಕರಿಗೆ ಶ್ರಮಕ್ಕೆ ತಕ್ಕ ಫಲ. ರಾಜಕೀಯ ರಂಗದವರಿಗೆ ಮಾತಿನಿಂದ ಸಮಾಜದಲ್ಲಿ ತೊಂದರೆ.

ಕಟಕ: ವಾದ ವಿವಾದಗಳಾಗುವ ಸಂಭವ. ವಿವಾಹದ ವಿಷಯದಲ್ಲಿ ವಿಫಲತೆ ಕಾಡಲಿದೆ. ಬಂಧು ಬಳಗದವರೊಡನೆ ಭಿನ್ನಾಭಿಪ್ರಾಯ.

ಸಿಂಹ: ಕ್ರೀಡಾಪಟುಗಳಿಗೆ ವಿಶೇಷ ದಿನ. ದಾಂಪತ್ಯದಲ್ಲಿ ವಿರಸ. ನವದಂಪತಿಗಳಿಗೆ ಸಂತಾನ ಯೋಗ. ವ್ಯಾಪಾರಿಗಳಿಗೆ ಧನ ನಷ್ಟ.

ಕನ್ಯಾ: ಮಗನ ಮದುವೆಗೆ ಬಂಧು ಮಿತ್ರರ ಸಹಕಾರ ದೊರೆಯಲಿದೆ. ಹೂಡಿಕೆಯಲ್ಲಿ ಲಾಭ ಬರುವುದು. ಭವಿಷ್ಯದ ಚಿಂತೆ ಕಾಡಲಿದೆ.

ತುಲಾ: ಮಹಿಳೆಯರಿಗೆ ಕೆಲಸದಲ್ಲಿ ಬಡ್ತಿ. ಕಟ್ಟಡ ನಿರ್ವಣದಲ್ಲಿ ಆಕಸ್ಮಿಕ ಘಟನೆ, ಮಾತೃ ವರ್ಗದವರಿಂದ ಸಹಾಯ, ನೆಮ್ಮದಿ.

ವೃಶ್ಚಿಕ: ಉತ್ತಮ ಆರೋಗ್ಯಕ್ಕಾಗಿ ವೈದ್ಯರ ಸಲಹೆ ಪಡೆಯಿರಿ. ಬಿದ್ದು ಪೆಟ್ಟಾಗುವ ಸಾಧ್ಯತೆಯಿದೆ. ಯಂತ್ರೋಪಕರಣಗಳಿಂದ ಲಾಭ.

ಧನಸ್ಸು: ಭೂ ವ್ಯವಹಾರದಲ್ಲಿ ತೊಂದರೆ. ಕಟ್ಟಡ ವೃತ್ತಿಯವರಿಗೆ ಅಡೆತಡೆ. ಚಾಲಕರಿಗೆ ಗಾಯಗಳಾಗುವ ಸಂಭವವಿದೆ, ಹುಷಾರು.

ಮಕರ: ವಕೀಲಿವೃತ್ತಿಯಲ್ಲಿ ತೊಂದರೆಯಿದೆ. ಮಹಿಳೆಯರು ಖರೀದಿಯಲ್ಲಿ ಮೋಸ ಹೋಗುವ ಸಂಭವ. ಹಣಕಾಸಿನ ತೊಂದರೆ.

ಕುಂಭ: ಧಿಕ ಪ್ರಯಾಣದಿಂದ ಆರೋಗ್ಯದಲ್ಲಿ ಸಮಸ್ಯೆ. ಮನೆಯ ಹಿರಿಯರೊಂದಿಗೆ ಜಗಳವಾದೀತು. ಸ್ನೇಹಿತರೇ ಶತ್ರುಗಳಾಗುತ್ತಾರೆ.

ಮೀನ: ವ್ಯಾಪಾರದ ಹೂಡಿಕೆಯಲ್ಲಿ ನಿರೀಕ್ಷಿತ ಲಾಭ ಸಿಗಲಿದೆ. ವಕೀಲರಿಗೆ ಶುಭದಾಯಕ ದಿನ. ರೇಷ್ಮೆ ಕೃಷಿಕರಿಗೆ ಆಕಸ್ಮಿಕ ಧನಪ್ರಾಪ್ತಿ.

Edited By : Nirmala Aralikatti
PublicNext

PublicNext

17/11/2024 07:37 am

Cinque Terre

144.54 K

Cinque Terre

0