", "articleSection": "Politics,Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/418299-1704880913-BUSS.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು : ಮಂಗಳೂರು ಮನಪಾ ಹೃದಯ ಭಾಗದಲ್ಲಿ ಸುಸಜ್ಜಿತ ಜಾಗವನ್ನು ಗುರುತಿಸಿ ಅಲ್ಲಿ ವೆಂಡಿಂಗ್ ಝೋನ್ ನಿರ್ಮಾಣ ಮಾಡಿ ಬೀದಿಬದಿ ವ್ಯಾಪಾರಿಗಳಿಗ...Read more" } ", "keywords": ",Udupi,Mangalore,Politics,Infrastructure,Government", "url": "https://publicnext.com/node" }
ಮಂಗಳೂರು : ಮಂಗಳೂರು ಮನಪಾ ಹೃದಯ ಭಾಗದಲ್ಲಿ ಸುಸಜ್ಜಿತ ಜಾಗವನ್ನು ಗುರುತಿಸಿ ಅಲ್ಲಿ "ವೆಂಡಿಂಗ್ ಝೋನ್'' ನಿರ್ಮಾಣ ಮಾಡಿ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಮಂಗಳೂರು ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಭರವಸೆ ನೀಡಿದರು.
ನಗರದ ಪುರಭವನದಲ್ಲಿ ನಡೆದ ದ.ಕ. ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರತಿ ವಾರ್ಡ್‌ಗಳಲ್ಲೂ ಸಾರ್ವಜನಿಕರಿಗೆ ತೊಂದರೆಯಾಗದ ಮನಪಾ ಜಾಗವನ್ನು ಗುರುತಿಸಿ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಆದ್ದರಿಂದ ಬೀದಿಬದಿ ವ್ಯಾಪಾರಿಗಳು ನಾವು ತೋರಿಸಿಕೊಟ್ಟಂತಹ ಜಾಗದಲ್ಲಿ ವ್ಯಾಪಾರ ಮಾಡಬೇಕು. ತಾವು ಎಲ್ಲಿ ವ್ಯಾಪಾರ ಮಾಡುತ್ತೀರೋ ಅಲ್ಲಿಗೆ ಗ್ರಾಹಕರು ಬರುತ್ತಾರೆ. ಬೀದಿಬದಿ ವ್ಯಾಪಾರಿಗಳ ವಸ್ತುಗಳಿಗೆ ಬೇರೆ ಅಂಗಡಿಗಳಿಗಿಂತ ದರ ಕಡಿಮೆ ಇರುವುದರಿಂದ ತಮ್ಮಲ್ಲಿಗೆ ಗ್ರಾಹಕರು ಬಂದೇ ಬರುತ್ತಾರೆ. ಆದ್ದರಿಂದ ತಮಗೆ ಎಲ್ಲಿಯೂ ತೊಂದರೆ ಆಗದ ರೀತಿಯಲ್ಲಿ ಮನಪಾದಿಂದ ವೆಂಡಿಂಗ್ ಝೋನ್ ನಿರ್ಮಿಸಲಾಗುತ್ತದೆ ಎಂದರು.
ದ.ಕ. ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘದ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ, ಈ ಸಹಕಾರ ಸಂಘದಲ್ಲಿ ಬೀದಿಬದಿ ವ್ಯಾಪಾರಿಗಳನ್ನೇ ನಿರ್ದೇಶಕರನ್ನಾಗಿ ಮಾಡಿದ್ದೇವೆ. ಶ್ರೀಮಂತರಿಂದ ಬಂಡವಾಳ ಹೂಡಿಕೆ ಈ ಸೊಸೈಟಿ ನಡೆಸುವುದಿಲ್ಲ. ಬದಲಾಗಿ ಬೀದಿಬದಿ ವ್ಯಾಪಾರಿಗಳ ದಿನದ ಉಳಿತಾಯದಿಂದಲೇ ಮುಂದುವರಿಸುತ್ತೇವೆ. ಪ್ರಾಮಾಣಿಕ, ನಿಷ್ಠೆಯಿಂದ ದ.ಕ. ಬೀದಿಬದಿ ವ್ಯಾಪಾರಸ್ಥರ ಸಂಘವನ್ನು ನಡೆಸಿಕೊಂಡು ಬಂದಿದ್ದೇವೆಯೋ, ಅದೇ ರೀತಿ ಸಹಕಾರ ಸಂಘವನ್ನು ನಡೆಸಿಕೊಂಡು ಹೋಗುತ್ತೇವೆ. 1,200 ಮಂದಿ ಬೀದಿಬದಿ ವ್ಯಾಪಾರಿಗಳನ್ನೇ ಸದಸ್ಯರನ್ನಾಗಿ ಮಾಡಿ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದೇವೆ. ಆದ್ದರಿಂದ ಈ ಸೊಸೈಟಿಯ ನಿಜವಾದ ವಾರಸುದಾರರು ಬೀದಿಬದಿ ವ್ಯಾಪಾರಿಗಳು ಎಂದು ಹೇಳಿದರು.
ಈ ವೇಳೆ ಬೀದಿಬದಿ ವ್ಯಾಪಾರಿಗಳಿಗೆ ಷೇರುಪತ್ರ ವಿತರಣೆ ಮಾಡಲಾಯಿತು.
Kshetra Samachara
10/01/2024 03:32 pm