", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/229640-1738857705-barat.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shivaram Bramhavar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬ್ರಹ್ಮಾವರ: ಉಡುಪಿಯಿಂದ ಶಿವಮೊಗ್ಗ ಬಾರಕೂರು ಮಾರ್ಗದ ರಾಜ್ಯ ಹೆದ್ದಾರಿಯ ಮೆಕ್ಕೆಕಟ್ಟೆಯ ಶ್ರೀ ನಂದಿಕೇಶ್ವರ ದೇವಸ್ಥಾನದ ಸ್ವಾಗತ ಕಮಾನು ಮತ್ತದರ ...Read more" } ", "keywords": "Brahmavar News, Mekkekatte, Tokyo City Welcome Arch, Bus Station, Karnataka Infrastructure, Udupi District News, Brahmavar City Development, Indian Architecture, Welcome Gate, Public Transportation.,Udupi,Mangalore,Infrastructure", "url": "https://publicnext.com/node" }
ಬ್ರಹ್ಮಾವರ: ಉಡುಪಿಯಿಂದ ಶಿವಮೊಗ್ಗ ಬಾರಕೂರು ಮಾರ್ಗದ ರಾಜ್ಯ ಹೆದ್ದಾರಿಯ ಮೆಕ್ಕೆಕಟ್ಟೆಯ ಶ್ರೀ ನಂದಿಕೇಶ್ವರ ದೇವಸ್ಥಾನದ ಸ್ವಾಗತ ಕಮಾನು ಮತ್ತದರ ಸನಿಹವಿರುವ ಬಸ್‌ನಿಲ್ದಾಣ ಟೋಕಿಯೋ ನಗರದಲ್ಲಿ ಕಾಣ ಸಿಗುವ ಮಾದರಿಯಲ್ಲಿ ನಿರ್ಮಾಣವಾಗಿದ್ದು ವಿಶಿಷ್ಟವಾಗಿ ಗಮನ ಸೆಳೆಯುತ್ತಿದೆ.
ಜಿಲ್ಲೆಯಾದ್ಯಂತ ಅನೇಕ ದೇವಸ್ಥಾನ, ದೈವಸ್ಥಾನಗಳಿಗೆ ಇರುವ ಸಾಂಪ್ರದಾಯಿಕ ಶಿಲ್ಪ ಶೈಲಿಯ ಸ್ವಾಗತ ಕಮಾನಿಗೂ ಮೆಕ್ಕೆಕಟ್ಟೆಯಲ್ಲಿರುವ ಕಮಾನಿಗೂ ಭಿನ್ನತೆ ಇದೆ. ಬುಡ 4 ಅಡಿ 1 ಇಂಚು ತ್ರಿಕೋನಾಕೃತಿಯಲ್ಲಿದ್ದು, ಮೇಲೆ ಹೋದಂತೆ ಅದು 12 ಇಂಚಿನ ಅಳತೆಗೆ ಬರುತ್ತದೆ. ಕಮಾನಿನ ಎತ್ತರ 40 ಅಡಿ ಇದ್ದು, 10 ಅಡಿ ನೆಲದ ಕೆಳಗೆ ಇದೆ. ಇದು ಟೋಕಿಯೋ ನಗರದಲ್ಲಿ ಕಾಣಸಿಗುವ ಸ್ವಾಗತ ಕಮಾನು ಮತ್ತು ಅಲ್ಲಿಯ ವಿನ್ಯಾಸದ ಬಸ್ ನಿಲ್ದಾಣ ಆಗಿದೆ.
ಇಂಜಿನಿಯರ್ ಮಾಡಿದ ಚಿತ್ರವನ್ನು ಕಾರ್ಯರೂಪದಲ್ಲಿ ಮಾಡುವುದು ತುಂಬಾ ಸವಾಲಿನ ಕೆಲಸವಾಗಿದ್ದು, ಅದೇ ಮಾದರಿಯ ಅಚ್ಚನ್ನು ನೆಲದಲ್ಲಿ ಮಾಡಿ ನಿಲ್ಲಿಸಿದ್ದು, 35 ವರ್ಷದ ಹಿಂದೆ ಅಚ್ಲಾಡಿ ಭುಜಂಗ ಶೆಟ್ಟಿಯವರು ಈ ಸ್ವಾಗತ ಕಮಾನನ್ನು ನಂದಿಕೇಶ್ವರ ದೇವಸ್ಥಾವಕ್ಕೆ ಸೇವಾ ರೂಪವಾಗಿ ನೀಡಿದ್ದರು. ಈ ವಿನ್ಯಾಸ ಮತ್ತು ರಚನೆ, ಭಾರತದ ತಂತ್ರಜ್ಞಾನಿಗಳಿಗೆ, ವಾಸ್ತು ವಿನ್ಯಾಸಕಾರರಿಗೆ ಸಂಶೋಧನಾತ್ಮಕವಾಗಿದೆ.
-ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್ ಬ್ರಹ್ಮಾವರ
PublicNext
06/02/2025 09:31 pm