", "articleSection": "Infrastructure,Nature,Government,Agriculture", "image": { "@type": "ImageObject", "url": "https://prod.cdn.publicnext.com/s3fs-public/229640-1738918560-hebri.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೆಬ್ರಿ: ಸರಕಾರದ ಯೋಜನೆ ವೈಜ್ಞಾನಿಕ ರೀತಿಯಲ್ಲಿ ಅನುಷ್ಠಾನಗೊಳ್ಳದೇ ಇದ್ದರೆ ಯಾವ ರೀತಿಯ ಸಮಸ್ಯೆ ತಂದೊಡ್ಡುತ್ತದೆ ಅನ್ನೋದಕ್ಕೆ ಇಲ್ಲಿ ನಿರ್ಮಾಣಗ...Read more" } ", "keywords": "Hebri News, Chikkamagaluru News, Karnataka Floods, Avinashilingam Dam, Unscientific Dam Construction, Areca Plantations Submerged, Karnataka Government, Dam Safety, Flood Relief, Environmental Impact, Karnataka Politics, Indian National Congress, Bharatiya Janata Party.,Udupi,Mangalore,Infrastructure,Nature,Government,Agriculture", "url": "https://publicnext.com/node" }
ಹೆಬ್ರಿ: ಸರಕಾರದ ಯೋಜನೆ ವೈಜ್ಞಾನಿಕ ರೀತಿಯಲ್ಲಿ ಅನುಷ್ಠಾನಗೊಳ್ಳದೇ ಇದ್ದರೆ ಯಾವ ರೀತಿಯ ಸಮಸ್ಯೆ ತಂದೊಡ್ಡುತ್ತದೆ ಅನ್ನೋದಕ್ಕೆ ಇಲ್ಲಿ ನಿರ್ಮಾಣಗೊಂಡಿರುವ ಕಿಂಡಿ ಅಣೆಕಟ್ಟೆ ಸಾಕ್ಷಿ. ಅವೈಜ್ಞಾನಿಕ ಕಿಂಡಿ ಅಣೆಕಟ್ಟು ಫಲವತ್ತಾದ ಕೃಷಿ ಭೂಮಿಯನ್ನೇ ಮುಳುಗುವಂತೆ ಮಾಡಿದ್ದು ಕೃಷಿಕರು ಕಂಗಾಲಾಗಿದ್ದಾರೆ.ಉಡುಪಿ ಜಿಲ್ಲೆಯ ಹೆಬ್ರಿಯ ತಾಲೂಕಿನ ಕುಚ್ಚೂರು, ಚಾರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಇದೀಗ ಫಲವತ್ತಾದ ಅಡಿಕೆ ತೋಟದಲ್ಲಿ 6-7 ಅಡಿಯಷ್ಟು ನೀರು ನಿಂತಿದೆ.ಎರಡು ಗ್ರಾಮ ಪಂಚಾಯತ್ ಗಡಿ ಭಾಗದಲ್ಲಿರುವ ಕಿಂಡಿ ಅಣೆಕಟ್ಟನ್ನು ಸುಮಾರು 88 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಅಣೆಕಟ್ಟು ಸೇತುವೆ ಯೋಜನೆ ಸಂದರ್ಭ ಸ್ಥಳೀಯ ಕೃಷಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ.ಇದರ ಪರಿಣಾಮವಾಗಿ ಯೋಜನೆ ಪೂರ್ಣಗೊಂಡ ಕೇವಲ ಒಂದೇ ವರ್ಷದಲ್ಲಿ ರೈತರಿಗೆ ಕಂಟಕವಾಗಿ ಪರಿಣಮಿಸಿದೆ.
ಇದೀಗ ಸ್ಥಳೀಯ ಕೃಷಿ ತೋಟಗಳಿಗೆ ಅಣೆಕಟ್ಟಿನ ಹೆಚ್ಚುವರಿ ನೀರು ಹರಿದು ಹಾನಿ ಸಂಭವಿಸಿದೆ. ಈ ಅಣೆಕಟೆಯಲ್ಲಿ 5 ಮೀಟರ್ ನೀರು ನಿಂತ ಕೂಡಲೇ ಸಮೀಪದ ಅಡಿಕೆ ತೋಟಕ್ಕೆ ನುಗ್ಗುತ್ತದೆ. ಸಣ್ಣ ನೀರಾವರಿ, ಅಂತರ್ಜಲ ನಿರ್ವಹಣಾ ಇಲಾಖೆ ಹೊಳೆಯ ಆಳ ಅಗಲ ಅರಿಯದೆ ಡ್ಯಾಮ್ ನಿರ್ಮಾಣ ಮಾಡಿತ್ತು.ಸೂಕ್ತ ತಡೆಗೋಡೆ ನಿರ್ವಹಣೆ ಇಲ್ಲದೆ ಸಮಸ್ಯೆಯಾಗಿದೆ.ಡ್ಯಾಮ್ ನಿರ್ಮಾಣದ ವೇಳೆಯೂ ಸ್ಥಳೀಯರಾದ ನಮ್ಮನ್ನು ವಿಶ್ವಾಸಕ್ಕೆ ಪಡೆಯಲಿಲ್ಲ ಎಂದು ಕೃಷಿಕರು ದೂರಿದ್ದಾರೆ. ನೀರು ಒಮ್ಮೆಲೆ ನುಗ್ಗಿದ್ದರಿಂದಾಗಿ ನಮ್ಮ 4.70 ಎಕರೆ ಕೃಷಿ ಭೂಮಿಗೆ ಹಾನಿಯಾಗಿದೆ. ನಮ್ಮ ಜಮೀನನ್ನು ಸರಕಾರವೇ ಸ್ವಾಧೀನಪಡಿಸಿ ಪರಿಹಾರ ನೀಡಲಿ ಎಂದು ಕೃಷಿಕರಾದ ಸಚಿನ್ ಮತ್ತು ಚಂದ್ರಣ್ಣ ಅಲವತ್ತುಕೊಂಡಿದ್ದಾರೆ.
PublicNext
07/02/2025 02:26 pm