", "articleSection": "Infrastructure,Crime,Law and Order,News", "image": { "@type": "ImageObject", "url": "https://prod.cdn.publicnext.com/s3fs-public/378325-1738934939-12.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ನಗರದ ಕುದ್ರೋಳಿಯ ಅಕ್ರಮ ಕಸಾಯಿಖಾನೆಗೆ ಶುಕ್ರವಾರ ಸಂಜೆ ವೇಳೆಗೆ ಮಂಗಳೂರು ಮನಪಾ ಮೇಯರ್ ಮನೋಜ್ ಕುಮಾರ್ ದಿಢೀರ್ ದಾಳಿ ನಡೆಸಿದ್ದಾರೆ. ...Read more" } ", "keywords": "Mangalore, Mayor Raid, Illegal Slaughterhouse, Shutdown Notice, Karnataka News, Animal Welfare, Municipal Administration.,Udupi,Infrastructure,Crime,Law-and-Order,News", "url": "https://publicnext.com/node" }
ಮಂಗಳೂರು: ನಗರದ ಕುದ್ರೋಳಿಯ ಅಕ್ರಮ ಕಸಾಯಿಖಾನೆಗೆ ಶುಕ್ರವಾರ ಸಂಜೆ ವೇಳೆಗೆ ಮಂಗಳೂರು ಮನಪಾ ಮೇಯರ್ ಮನೋಜ್ ಕುಮಾರ್ ದಿಢೀರ್ ದಾಳಿ ನಡೆಸಿದ್ದಾರೆ.
ಕುದ್ರೋಳಿಯಲ್ಲಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆ ಮಾಲಿನ್ಯ ನಿಯಂತ್ರಣ ಮಂಡಳಿಯ ಸೂಚನೆ ಮೇರೆಗೆ ನಾಲ್ಕೈದು ವರ್ಷಗಳ ಹಿಂದೆಯೇ ಸ್ಥಗಿತಗೊಂಡಿತ್ತು. ಆದರೆ, ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಮೇಯರ್ ಅವರಿಗೆ ಕುದ್ರೋಳಿಯ ಕಸಾಯಿಖಾನೆಯಲ್ಲಿ ಅಕ್ರಮವಾಗಿ ಪ್ರಾಣಿವಧೆ ಆಗುತ್ತಿದೆ ಎಂಬ ಮಾಹಿತಿ ಬಂದಿತ್ತು. ಆದ್ದರಿಂದ ಶುಕ್ರವಾರ ಸಂಜೆ ಮೇಯರ್, ಕೆಲ ಮನಪಾ ಸದಸ್ಯರು ಹಾಗೂ ಮನಪಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ವೇಳೆ ಸ್ಥಗಿತಗೊಂಡಿದ್ದ ಕಸಾಯಿಖಾನೆಯಲ್ಲಿ ಯಾವುದೇ ಪ್ರಾಣಿ ವಧೆ ನಡೆಯುತ್ತಿರಲಿಲ್ಲ. ಆದರೆ, ಅಲ್ಲಿಯೇ ಖಾಸಗಿ ವ್ಯಕ್ತಿಯೋರ್ವನು ಶೆಡ್‌ನಲ್ಲಿ ಅಕ್ರಮವಾಗಿ ಪ್ರಾಣಿ ವಧೆ ಮಾಡುತ್ತಿರುವುದು ಕಂಡು ಬಂದಿದೆ. ಸುಮಾರಷ್ಟು ಜೀವಂತ ಕುರಿಗಳು ಹಾಗೂ ಗೋವು ಮತ್ತು ಕೋಣಗಳ ಮಾಂಸ, ತಲೆ, ಕೊಂಬು ಕಂಡು ಬಂದಿದೆ ಎಂದು ಮೇಯರ್ ತಿಳಿಸಿದ್ದಾರೆ.
ಬೈಟ್: ಮನೋಜ್ ಕುಮಾರ್, ಮೇಯರ್
ಈ ಬಗ್ಗೆ ಮೇಯರ್ ಮನೋಜ್ ಕುಮಾರ್ ಮಾಹಿತಿ ನೀಡಿ, ನಾವು ದಾಳಿ ನಡೆಸುತ್ತಿರುವ ಸುದ್ದಿ ತಿಳಿದು ಕಸಾಯಿಖಾನೆ ನಡೆಸುತ್ತಿರುವವರು ಪರಾರಿಯಾಗಿದ್ದಾರೆ. ಈ ಕಸಾಯಿಖಾನೆ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇವೆ. ಅಲ್ಲದೆ, ಈ ಅಕ್ರಮ ಕಟ್ಟಡವನ್ನು ಧ್ವಂಸಗೊಳಿಸುತ್ತೇವೆ ಎಂದು ಹೇಳಿದರು.
PublicNext
07/02/2025 06:59 pm