", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/378325-1738846871-24.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SundarChamarajnagar" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬಂಡೀಪುರ - ಊಟಿ ರಸ್ತೆಯಲ್ಲಿ ಒಂಟಿಸಲಗವೊಂದು ರಸ್ತೆಗೆ ಬಂದು ವಾಹನಗಳನ್ನು ಅಡ್ಡಗಟ್ಟಿ ತರಕಾರಿ ತುಂಬಿದ ವಾಹನಗಳ ಮೇಲೆ ದಾಂಧಲೆ ನಡೆಸಿದೆ. ಈ ರ...Read more" } ", "keywords": "Bandipur, Ooty Road, Elephant Attack, Vehicle Commuters, Wildlife Encounter, Forest Department, Animal Conservation, Road Safety, Karnataka Tourism, Nilgiri Biosphere.,,News", "url": "https://publicnext.com/node" } ಬಂಡೀಪುರ - ಊಟಿ ರಸ್ತೆಯಲ್ಲಿ ಗಜರಾಜನ ದಾಂಧಲೆ, ವಾಹನ‌ ಸವಾರರ ಪರದಾಟ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಡೀಪುರ - ಊಟಿ ರಸ್ತೆಯಲ್ಲಿ ಗಜರಾಜನ ದಾಂಧಲೆ, ವಾಹನ‌ ಸವಾರರ ಪರದಾಟ

ಬಂಡೀಪುರ - ಊಟಿ ರಸ್ತೆಯಲ್ಲಿ ಒಂಟಿಸಲಗವೊಂದು ರಸ್ತೆಗೆ ಬಂದು ವಾಹನಗಳನ್ನು ಅಡ್ಡಗಟ್ಟಿ ತರಕಾರಿ ತುಂಬಿದ ವಾಹನಗಳ ಮೇಲೆ ದಾಂಧಲೆ ನಡೆಸಿದೆ.

ಈ ರಸ್ತೆಯಲ್ಲಿ ಆಗಿಂದಾಗ್ಗೆ ಕಾಡಾನೆಗಳು ರಸ್ತೆಗೆ ಬಂದು ತರಕಾರಿ ತುಂಬಿಕೊಂಡು ಸಾಗುವ ವಾಹನಗಳನ್ನು ಅಡ್ಡ ಗಟ್ಟಿ, ದಾಂಧಲೆ ನಡೆಸಲಿವೆ. ಅದರಂತೆಯೇ ಇಂದು ಒಂಟಿ ಸಲಗವೊಂದು ರಸ್ತೆಗೆ ಆಗಮಿಸಿ ವಾಹನಗಳನ್ನು ಅಡ್ಡಗಟ್ಟಿ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ. ಅಲ್ಲದೇ ತರಕಾರಿ ತುಂಬಿಕೊಂಡು ಹೋಗುತ್ತಿದ್ದ ವಾಹನವನ್ನು ತಡೆದು ತನ್ನ ದಂತದಿಂದ ವಾಹನಕ್ಕೆ ಕಟ್ಟಲಾಗಿದ್ದ ಟಾರ್ಪಲ್ ಗೆ ಚುಚ್ಚಿ ಹರಿದು, ತರಕಾರಿಯನ್ನು ಕೆಳಗೆ ಬೀಳಿಸಿತು.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಆನೆ ರಸ್ತೆಯಲ್ಲಿ ನಿಂತು ದಾಂಧಲೆ ನಡೆಸಿತು. ಇದರಿಂದ ವಾಹನ‌ ಸವಾರರು ಪರದಾಡುವಂತಾಯಿತು. ಬಳಿಕ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಒಂಟಿ ಸಲಗವನ್ನು ಕಾಡಿಗಟ್ಟಿದರು.

Edited By : Somashekar
PublicNext

PublicNext

06/02/2025 06:31 pm

Cinque Terre

145.41 K

Cinque Terre

2

ಸಂಬಂಧಿತ ಸುದ್ದಿ