", "articleSection": "Politics,Religion", "image": { "@type": "ImageObject", "url": "https://prod.cdn.publicnext.com/s3fs-public/462628-1738926106-WhatsApp-Image-2025-02-07-at-4.29.25-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Umesh Mangalore" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿ ಅಭಿವೃದ್ಧಿಗೆ ಅಡ್ಡಿ ಪಡಿಸುತ್ತಿರುವ ಮತ್ತು ಪುತ್ತ...Read more" } ", "keywords": "Mangaluru, BJP, Hindutva, Karnataka Congress, MG Hegde, Indian politics, political news, Karnataka news, Mangaluru news, Congress spokesperson, BJP criticism, Hindutva debate, Indian elections, political parties, Karnataka politics, Mangaluru events, political events, news updates, current events, India news, politics and governance, election news, political analysis, BJP news, Congress news, Karnataka government, Indian government,Mangalore,Politics,Religion", "url": "https://publicnext.com/node" }
ಮಂಗಳೂರು: ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿ ಅಭಿವೃದ್ಧಿಗೆ ಅಡ್ಡಿ ಪಡಿಸುತ್ತಿರುವ ಮತ್ತು ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಫೆ.7ರಂದು ಬೆಳಿಗ್ಗೆ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ವಕ್ತಾರ ಎಂ.ಜಿ.ಹೆಗಡೆ ಮಾತನಾಡಿ, ಬಿಜೆಪಿಯವರು ನವ ಹಿಂದುತ್ವದ ಹೆಸರಿನಲ್ಲಿ ನಕಲಿ ಹಿಂದುತ್ವ ಮಾಡಿಕೊಂಡು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಹಿಂದುತ್ವ ಎಂದು ಹೇಳಿಕೊಂಡು ದೇವಸ್ಥಾನದ ಅಭಿವೃದ್ಧಿಗೆ ಅಡ್ಡಿ ಪಡಿಸುತ್ತಿದ್ದಾರೆ. ಇವರ ನಕಲಿ ಹಿಂದುತ್ವವನ್ನು ನಿರಂತರ ವಿರೋಧಿಸಬೇಕು. ಹಿಂದುತ್ವ, ಭಕ್ತಿ, ಆರಾಧನೆಗಳು ಪರಮಾತ್ಮನ ಕಡೆಗೆ ಇರಬೇಕು. ಆದರೆ, ಬಿಜೆಪಿಯ ಹಿಂದುತ್ವ, ಭಕ್ತಿ ಓಟು ಹಾಗೂ ಬ್ಯಾಲೆಟ್ ಪೇಪರ್ ಮೇಲೆ ಮಾತ್ರ ಇದೆ. ಇದೀಗ ಪುತ್ತೂರಿನ ಕಾಂಗ್ರೆಸಿಗರಿಗೆ ದೇವರು ಅವಕಾಶ ನೀಡಿದ್ದಾನೆ. ಬಿಜೆಪಿಯ ನಕಲಿ ಹಿಂದುತ್ವವನ್ನು ಜನರಿಗೆ ನಿರಂತರ ತಿಳಿಸುವ ಕೆಲಸ ಮಾಡಬೇಕು ಎಂದರು.
Kshetra Samachara
07/02/2025 04:32 pm