ಮಂಗಳೂರು: 300 ವರ್ಷಗಳ ಇತಿಹಾಸ ಇರೋ ಆ ದೇವಸ್ಥಾನದಲ್ಲಿ ಸುಮಾರು 60 ವರ್ಷಗಳ ಹಿಂದೆ, ರಥೋತ್ಸವ ನಡೆಯುತ್ತಿತ್ತು. ಲಕ್ಷ್ಮಿ ವೆಂಕಟರಮಣ ದೇವರು ಬ್ರಹ್ಮ ರಥ ಏರಿ, ಭಕ್ತರಿಗೆ ದರ್ಶನ ನೀಡುತ್ತಿದ್ದರು. ಆದ್ರೆ ಬ್ರಹ್ಮ ರಥ ಶಿಥಿಲವಾದ ಬಳಿಕ ರಥೋತ್ಸವವೇ ನಿಂತಿತ್ತು. ಇದೀಗ ಮತ್ತೆ ಗತ ವೈಭವ ಮರುಕಳಿಸಿದೆ. ಲಕ್ಷ್ಮಿ ವೆಂಕಟರಮಣ ದೇವರು ಮತ್ತೆ ರಥವೇರಿದ್ದಾರೆ, ಭಕ್ತರು ದೇವರನ್ನು ಕಣ್ತುಂಬಿಕೊಂಡು ಪುನೀತರಾಗಿದ್ದಾರೆ.
ರಥವೇರಿದ ಲಕ್ಷಿ ವೆಂಕಟರಮಣ, ರಥಬೀದಿಯಲ್ಲಿ ರಥೋತ್ಸವದ ಸೊಬಗು, ಸಿಡಿ ಮದ್ದಿನ ಅಬ್ಬರ, ವೆಂಕಟರಮಣ ಗೋವಿಂದ ಎನ್ನುವ ಭಕ್ತರ ಹರ್ಷೋದ್ಘಾರ. ಇದು ಬರೋಬ್ಬರಿ 60 ವರ್ಷಗಳ ಬಳಿಕ ನಡೆಯುತ್ತಿರುವ ರಥೋತ್ಸವ..ಹಾಗಾಗಿ ಸಂಭ್ರಮ ಸಡಗರವೂ ಜೋರಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಶೆಕೋಡಿ ಲಕ್ಷ್ಮಿ ವೆಂಕಟರಮಣ ದೇವಸ್ಥಾನಕ್ಕೆ ಸುಮಾರು 300 ವರ್ಷಗಳ ಇತಿಹಾಸ ಇದೆ. RSB ಸಮಾಜ ಬಾಂಧವರು ಆರಾಧಿಸಿ ಬಂದಿರುವ ಈ ದೇಗುಲದಲ್ಲಿ ಹಿಂದೆ ವೈಭದವ ರಥೋತ್ಸವ ನಡೆಯುತ್ತಿತ್ತು. ಆದ್ರೆ ರಥ ಶಿಥಿಲವಾದ ಬಳಿಕ ರಥೋತ್ಸವ ನಿಂತಿತ್ತು. ಇದೀಗ ಮತ್ತೆ ಇತಿಹಾಸ ಮರಳಿದೆ. ರಥಬೀದಿಯಲ್ಲಿ ಲಕ್ಷ್ಮಿ ವೆಂಕಟರಮಣ ರಥವೇರಿ ರಥೋತ್ಸವ ನಡೆದಿದೆ..
PublicNext
07/02/2025 04:47 pm