ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ತಡರಾತ್ರಿವರೆಗೆ ಯಕ್ಷಗಾನ - ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿ ಯಕ್ಷಗಾನ ನಿಲ್ಲಿಸಿದ ಪೊಲೀಸರು

ಉಡುಪಿ: ಉಡುಪಿಯ ಅಲೆವೂರಿನಲ್ಲಿ ತಡರಾತ್ರಿ ನಡೆಯುತ್ತಿದ್ದ ಯಕ್ಷಗಾನವನ್ನು ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಬಂದು ನಿಲ್ಲಿಸಿದ ಪ್ರಸಂಗ ನಡೆದಿದೆ.

ಅಲೆವೂರಿನ ಸಂಕಲ್ಪ‌ ಸಂಭಾಂಗಣದಲ್ಲಿ 12-30 ತನಕ ಯಕ್ಷಗಾನ ನಡೆಯುತ್ತಿತ್ತು. ಮಡಾಮಕ್ಕಿ ಮೇಳದವರು ಈ ಯಕ್ಷಗಾನ ಪ್ರಸಂಗ ನಡೆಸುತ್ತಿದ್ದರು. ತಡರಾತ್ರಿಯಾದ ಕಾರಣ ಯಾರೋ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯಕ್ಷಗಾನ ನಿಲ್ಲಿಸುವಂತೆ ಮನವಿ ಮಾಡಿದ್ದು, ಅದರಂತೆ ಯಕ್ಷಗಾನ ನಿಲ್ಲಿಸಲಾಯಿತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Edited By : Suman K
Kshetra Samachara

Kshetra Samachara

07/02/2025 01:16 pm

Cinque Terre

3.78 K

Cinque Terre

1

ಸಂಬಂಧಿತ ಸುದ್ದಿ