ಮಂಗಳೂರು: ನಗರ ಪ್ರದೇಶದಲ್ಲಿಯೇ ಗೋವುಗಳನ್ನು ವಧೆ ಮಾಡಲಾಗುತ್ತಿದ್ದು ಸಚಿವ ಮಾಂಕಾಳ್ ವೈದ್ಯ ಹೇಳಿದಂತೆ ಆರೋಪಿಗಳ ಮೇಲೆ ಗುಂಡಿಕ್ಕಿ ಕ್ರಮ ಕೈ ಗೊಂಡರೆ ಗೋ ವಧೆ ನಿಲ್ಲಿಸಲು ಸಾಧ್ಯ. ಪೊಲೀಸರು ಸಚಿವರ ಸಲಹೆ ಪಾಲನೆ ಮಾಡಲು ಮುಂದಾಗ ಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದ್ದಾರೆ.
ಮಂಗಳೂರಿನ ಅಳಕೆಯಲ್ಲಿ ಅಕ್ರಮ ಗೋವಧೆ ಕೇಂದ್ರ ವನ್ನು ಮೇಯರ್ ಮನೋಜ್ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ಪತ್ತೆ ಮಾಡಿದನ್ನು ಶ್ಲಾಘೀಸುತ್ತೇನೆ. ದರೋಡೆಕೋರರ ವಿರುದ್ಧ ಫೈರಿಂಗ್ ಮಾಡುವ ಪೊಲೀಸರು ಅಕ್ರಮ ಗೋ ಸಾಗಾಟ ಗಾರರ ವಿರುದ್ಧವು ಇಂಥ ಕ್ರಮ ಕೈಗೊಂಡರೆ ತಾನಾಗಿಯೇ ಕಡಿಮೆ ಆಗುದರಲ್ಲಿ ಸಂಶಯವಿಲ್ಲ.
ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ ಬಿಜೆಪಿ ಸರ್ಕಾರ ಆಸ್ತಿ ಮುಟ್ಟುಗೊಲು ಕ್ರಮ ಜಾರಿಗೆ ತಂದು ಅಕ್ರಮ ಗೋ ವದೆ ಮಾಡುವವರ ವಿರುದ್ಧ ಕ್ರಮ ಕೈಗೊಂಡಿದೆ. ನನ್ನ ಕ್ಷೇತ್ರಡಲ್ಲಿಯೇ ಹಲವು ಪ್ರಕರಣ ದಾಖಲಿಸಿ ಆಸ್ತಿ ಮುಟ್ಟುಗೊಲು ಹಾಕಿಸಿದ್ದೇನೆ.
ಕಾಂಗ್ರೆಸ್ ಸರ್ಕಾರ ಮಾತ್ರ ಗೋ ವಧೆ ಪ್ರಕರಣ ಗಳನ್ನು ನಿರ್ಲಕ್ಷ್ಯ ಮಾಡಿದ್ದು ಮತ್ತೆ ಕಸಾಯಿ ಖಾನೆ ಗಳು ತಲೆ ಎತ್ತಿವೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಆರೋಪಿಸಿದ್ದಾರೆ.
Kshetra Samachara
07/02/2025 07:34 pm