ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುನೀಲ್ ‌ಕುಮಾರ್ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ

ಕಾರ್ಕಳ : ಕಾರ್ಕಳ ಶಾಸಕ ಸುನೀಲ್ ‌ಕುಮಾರ್ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ದ ಇಂದು ಬೃಹತ್ ಪ್ರತಿಭಟನೆ ನಡೆಯಿತು. ಕಾರ್ಕಳ‌ ತಾಲೂಕು‌ ಕಚೇರಿ ಮುಂದೆ ಈ ಪ್ರತಿಭಟನೆ ನಡೆಯಿತು. ಮಾಜಿ ಸಚಿವ ,ಕಾರ್ಕಳ ಶಾಸಕ ಸುನೀಲ್ ‌ಕುಮಾರ್ ನೇತೃತ್ವದಲ್ಲಿ ಘೋಷಣೆಗಳನ್ನು ಕೂಗಿ ಪ್ರತಿಭಟನಕಾರರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯಲ್ಲಿ ರಾಜ್ಯ ಸರಕಾರಕ್ಕೆ ಧಿಕ್ಕಾರ ಕೂಗಿದ ಪ್ರತಿಭಟನಕಾರರು,60% ಸರ್ಕಾರ ಎಂದು ಲೇವಡಿ ಮಾಡಿದರು. ರಾಜ್ಯ ಸರಕಾರ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ. ಇದಲ್ಲದೆ ಹಾಲು ಸಬ್ಸಿಡಿ, ಅಕ್ರಮ ಸಕ್ರಮ ಅರ್ಜಿ‌ ತಿರಸ್ಕಾರ ಸೇರಿದಂತೆ ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಪ್ರತಿಭಟನಕಾರರು ಖಂಡಿಸಿದರು.

ಕರಾವಳಿಯ ಯಕ್ಷಗಾನ, ಕೋಳಿ ಅಂಕಗಳಿಗೂ ಕಾಂಗ್ರೆಸ್ ಸರಕಾರ ಅಡ್ಡಿ ಪಡಿಸುತ್ತಿದ್ದು ಇದೊಂದು

ಹಿಂದೂ ವಿರೋಧಿ ಸರಕಾರ ಎಂದು ಸುನಿಲ್ ಕುಮಾರ್ ಟೀಕಿಸಿದರು. ನೂರಾರು ಪ್ರತಿಭಟನಾಕಾರರು

"ದಂಡ ಪಿಂಡಗಳು...." ಹಾಡು ಹಾಡುವ ಮೂಲಕ ಸರ್ಕಾರವನ್ನು ಟೀಕಿಸಿದರು.

Edited By : Somashekar
Kshetra Samachara

Kshetra Samachara

06/02/2025 02:50 pm

Cinque Terre

16.54 K

Cinque Terre

0

ಸಂಬಂಧಿತ ಸುದ್ದಿ