ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: "ನಟಿ, ತಾಯಿಯಾಗಿ, ರಾಜಕಾರಣಿಯಾಗಿ ಉಮಾಶ್ರೀ ಸಾಧನೆ ಪ್ರಶಂಸನೀಯ"- ನಾಗಲಕ್ಷ್ಮಿ ಚೌಧರಿ ಗುಣಗಾನ

ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದಲ್ಲಿ ಹಮ್ಮಿಕೊಂಡಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವ ೨೦೨೫ ಕಾರ್ಯಕ್ರಮದಲ್ಲಿ ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಸಾನಿಧ್ಯ ವಹಿಸಿದ್ದರು. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅಧ್ಯಕ್ಷತೆ ವಹಿಸಿದ್ದರು.

ಚಾಮರಾಜನಗರ ಎಸ್ಪಿ ಕವಿತಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಉಮಾಶ್ರೀ ಅವರ ಕುರಿತು ಮಾತನಾಡುತ್ತಾ, ಉಮಾಶ್ರೀ ನಟಿಯಾಗಿ, ತಾಯಿಯಾಗಿ, ಉತ್ತಮ ರಾಜಕಾರಣಿಯಾಗಿ ನಾನು ನೋಡಿದ್ದು ಬಹಳಷ್ಟು ಅವಮಾನಗಳನ್ನ ದಾಟಿ ಯಶಸ್ಸು ಗಳಿಸುತ್ತಾ ಬಂದಿದ್ದಾರೆ. ಎಲ್ಲಾ ಹಂತದಲ್ಲೂ ಅವಮಾನಗಳು ಸಹಜ. ನಿಂದನೆಗಳನ್ನ ಬದಿಗಿಟ್ಟು ಯಾವುದೇ ಕಷ್ಟಗಳು ಬಂದರೂ ಕೂಡ ಎಲ್ಲವನ್ನ ಎದುರಿಸೋ ಶಕ್ತಿ ನಮ್ಮಲ್ಲಿ ಇರಬೇಕು ಎಂದರು. ಅನೇಕ ಗಣ್ಯರು ಭಾಗವಹಿಸಿದ್ದರು.

Edited By : Vinayak Patil
PublicNext

PublicNext

05/02/2025 10:10 pm

Cinque Terre

10.67 K

Cinque Terre

0

ಸಂಬಂಧಿತ ಸುದ್ದಿ