ಹುಬ್ಬಳ್ಳಿ: ಅಯೋಧ್ಯೆಯಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ಪ್ರಸ್ತಾಪ ಮಾಡದವರು, ಅಂಜಲಿ ಹತ್ಯೆ ಪ್ರಕರಣದ ಹಿಂದಿರುವ ಆರೋಪಿಗಳನ್ನು ಬಂಧಿಸಿ ಎಂದು ಹೇಳಲು ಆಗದೇ ಇರುವವರು ಸಾವಿನ ಮನೆಯಲ್ಲಿಯೂ ಜಾತಿವಾದಿತನ ಮಾಡುತ್ತಿರುವುದನ್ನ ಸಮತಾ ಸೇನಾ ಮತ್ತು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ತೀವ್ರವಾಗಿ ಖಂಡಿಸುತ್ತದೆ ಎಂದು ಸಮತಾ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯನ್ನು ಉಲ್ಲೇಖಿಸಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದು, ಶಾಸಕರೊಬ್ಬರ ಕೈವಾಡ ಎಂದು ಹೇಳಿರುವ ಪ್ರಮೋದ್ ಮುತಾಲಿಕ್, ಯಾರು ಆ ಶಾಸಕ ಎಂದು ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾವಿನ ಮನೆಯಲ್ಲಿ ಜಾತಿ ಮಾಡುವ, ಫೆಬ್ರವರಿ ತಿಂಗಳಲ್ಲಿ ಜಾಗರೂಕರಾಗುವ ಪ್ರಮೋದ್ ಮುತಾಲಿಕ್ ಅವರೇ, ದಲಿತ ಯುವತಿಯರ ಮೇಲೆ ಯಾಕೆ ಕಾಳಜಿಯಿಲ್ಲ. ಸಾವಿನ ಮನೆಯಲ್ಲೂ ಜಾತಿ ರಾಜಕೀಯ ಮಾಡುವ ನಿಮ್ಮ ನಡೆಗೆ ಧಿಕ್ಕಾರವಿರಲಿ ಎಂದು ಕಿಡಿಕಾರಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/02/2025 09:24 pm