", "articleSection": "Infrastructure,Health & Fitness,Education,Government", "image": { "@type": "ImageObject", "url": "https://prod.cdn.publicnext.com/s3fs-public/229640-1738770450-sari.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArujunChitradruga" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿದ್ದರು. ಈ ವೇಳೆ ಸರಕಾರಿ ನರ್ಸಿಂಗ್ ಕಾಲೇಜು ವಿದ...Read more" } ", "keywords": "Chitradurga News, Dr Nagalakshmi Chowdary, Nursing College Students, Motivational Speech, Women Empowerment, Education News, Karnataka Colleges, Chitradurga Nursing College, Inspirational Talk.,Chitradurga,Infrastructure,Health-and-Fitness,Education,Government", "url": "https://publicnext.com/node" } ಚಿತ್ರದುರ್ಗ: ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಿಗೆ ಡಾ. ನಾಗಲಕ್ಷ್ಮೀ ಚೌಧರಿ ಸ್ಪಂದನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಿಗೆ ಡಾ. ನಾಗಲಕ್ಷ್ಮೀ ಚೌಧರಿ ಸ್ಪಂದನೆ

ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿದ್ದರು. ಈ ವೇಳೆ ಸರಕಾರಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಅವರ ಮುಂದೆ ಕಾಲೇಜಿನ ಅವ್ಯವಸ್ಥೆ ಕುರಿತಂತೆ ಸಾಲು ಸಾಲು ಸಮಸ್ಯೆಗಳನ್ನು ಹೇಳಿಕೊಂಡ್ರು.

ನರ್ಸಿಂಗ್ ಕಾಲೇಜು ಹೊಸ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ನಡೆಯುತ್ತಿದ್ದು, ಕಾಲೇಜಾಗಲೀ, ಕ್ಯಾಂಪಸ್ ಆಗಲಿ ಇಲ್ಲ. ಸರಿಯಾದ ಕ್ಲಾಸ್ ರೂಮ್, ವಾಶ್ ರೂಮ್ ಸೌಲಭ್ಯ ಇಲ್ಲ. ಇಂಥ ವಾತಾವರಣದಲ್ಲಿ ಕಲಿಯುವುದು ಹೇಗೆ? ಅಂತಾ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡ್ರು‌.

ಈ ವಿಚಾರವಾಗಿ ಡಾ.ನಾಗಲಕ್ಷ್ಮೀ ಚೌಧರಿ ಕಾಲೇಜು ಪ್ರಾಂಶುಪಾಲರು ಹಾಗೂ ಜಿಲ್ಲಾ ಸರ್ಜನ್ ವಿರುದ್ಧ ಗರಂ ಆದ್ರು. ಇನ್ನು ಲೈಂಗಿಕ ದೌರ್ಜನ್ಯ ಮಾಡುವ ಬೋಧಕ ಸಿಬ್ಬಂದಿಯನ್ನು ಕಾಲೇಜಲ್ಲಿ ಮುಂದುವರೆಸಿದ ಡಿಎಸ್ ಕ್ರಮಕ್ಕೆ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು. ಇದನ್ನು ಅರಿತ ನಾಗಲಕ್ಷ್ಮೀ ಚೌಧರಿ ಜಿಲ್ಲಾ ಸರ್ಜನ್‌ನ್ನು ಪ್ರಶ್ನೆ ಮಾಡಿದ್ರು. ಈ ವೇಳೆ ನ್ಯಾಯಾಲಯದಿಂದ ಆದೇಶ ಇರುವ ಕಾರಣ ಅವರನ್ನು ಕಂಟಿನ್ಯೂ ಮಾಡಿದ ಕುರಿತು ಜಿಲ್ಲಾ ಸರ್ಜನ್ ಡಾ. ಎಸ್. ರವೀಂದ್ರ ಮಾಹಿತಿ ನೀಡಿದ್ರು.

Edited By : Manjunath H D
PublicNext

PublicNext

05/02/2025 09:17 pm

Cinque Terre

10.86 K

Cinque Terre

0

ಸಂಬಂಧಿತ ಸುದ್ದಿ