", "articleSection": "Education,Government", "image": { "@type": "ImageObject", "url": "https://prod.cdn.publicnext.com/s3fs-public/235762-1738753123-Untitled-design---2025-02-05T162620.496.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Padmashree" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗೆ ಬಿಬಿಎಂಪಿ ತಯಾರಿ ನಡೆಸುತ್ತಿದೆ. ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಗೆ ಅಂತ ಖಾಸಗಿ ಸಂಸ್ಥೆಗೆ ...Read more" } ", "keywords": ""BBMP initiatives, out-of-school children, education survey, Bengaluru city news, BBMP education department, dropout children, school enrollment drive, education welfare schemes, child education initiatives" ,Bangalore,Bangalore-Rural,Education,Government", "url": "https://publicnext.com/node" }
ಬೆಂಗಳೂರು: ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗೆ ಬಿಬಿಎಂಪಿ ತಯಾರಿ ನಡೆಸುತ್ತಿದೆ. ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಗೆ ಅಂತ ಖಾಸಗಿ ಸಂಸ್ಥೆಗೆ ಬಿಬಿಎಂಪಿ ಟೆಂಡರ್ ಕರೆದಿದೆ. ಆದ್ರೆ ಎರಡು ಬಾರಿ ಟೆಂಡರ್ ಕರೆದ್ರೂ ಯಾವುದೇ ಗುತ್ತಿಗೆದಾರರ ಟೆಂಡರ್‌ಗೆ ಅರ್ಜಿ ಸಲ್ಲಿಸಿಲ್ಲ. ಈ ಹಿನ್ನೆಲೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಮಾಡಲು ಸ್ವತಃ ಬಿಬಿಎಂಪಿ ಮುಂದಾಗಿದೆ.
ಪಾಲಿಕೆ ಸಿಬ್ಬಂದಿಯನ್ನು ಬಳಸಿಕೊಂಡು ಸಮೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ. ಈಗಾಗಲೇ ಮೊಬೈಲ್ ಆ್ಯಪ್ ರೆಡಿ ಮಾಡಿದ್ದಾರೆ. ಮಕ್ಕಳ ಸಮೀಕ್ಷೆಗೆ ನೋಡಲ್ ಅಧಿಕಾರಿ ನೇಮಿಸಿ ಅದೇಶ ನೀಡಿದ ಪಾಲಿಕೆ ಆಯುಕ್ತರು, ಬಿಬಿಎಂಪಿ ಅರೋಗ್ಯ ಇಲಾಖೆಯ ಸಿಬ್ಬಂದಿ, ಕೆಲ ಸಂಘ. ಸಂಸ್ಥೆಗಳನ್ನು ಬಳಕೆ ಮಾಡಿಕೊಂಡು ಸಮೀಕ್ಷೆ ನಡೆಸುತ್ತಿದ್ದಾರೆ. ಪ್ರತಿ ವಾರ್ಡ್‌ಗೂ 10 ಜನ ಮಕ್ಕಳ ಗಣತಿಗೆ ನೇಮಕ ಮಾಡಿದ್ದು, ನಿತ್ಯ ಪ್ರತಿ ಒಬ್ಬರು 50 ಮನೆ ಸಮೀಕ್ಷೆ ನಡೆಸಿ ವರದಿ ನೀಡಬೇಕು. ಒಂದು ತಿಂಗಳಲ್ಲಿ ಸರ್ವೆ ಸಮೀಕ್ಷೆ ಮುಗಿಸಿ ಪಾಲಿಕೆ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಬೇಕು ಎಂದು ಆದೇಶ ನೀಡಿದ್ದಾರೆ.
Kshetra Samachara
05/02/2025 04:29 pm