ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳ ಆಸ್ತಿ ಘೋಷಣೆಗೆ ಒತ್ತಾಯಿಸಿ ಲೋಕಾಯುಕ್ತ ಕಚೇರಿಗೆ KRS ಕಾರ್ಯಕರ್ತರು ಮುತ್ತಿಗೆಗೆ ಯತ್ನಿಸಿದ್ದಾರೆ. ಏಕಾಏಕಿ 30ಕ್ಕೂ ಹೆಚ್ಚು ಜನರಿಂದ ಮುತ್ತಿಗೆಗೆ ಯತ್ನಿಸಿದ್ದು, ಅಧಿಕಾರಿಗಳು ಮೊದಲು ತಮ್ಮ ಆಸ್ತಿ ಘೋಷಿಸಿ ಅಂತ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.
ಭ್ರಷ್ಟಾಚಾರ ತನಿಖೆಗಳಿಗೆ ಅನುಕೂಲ ಆಗುವಂತೆ ರಾಜ್ಯ ಸರ್ಕಾರಿ ನೌಕರರು, ಅಧಿಕಾರಿಗಳ ಆಸ್ತಿ ವಿವರಗಳನ್ನ ಆನ್ ಲೈನ್ ನಲ್ಲಿ ಆ್ಯಪ್ ಮಾಡಿ ಆ ಮಾಹಿತಿ ಪಡೆಯಲು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಲಾಗಿನ್ ಆಗುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಲೋಕಾಯುಕ್ತ ಪತ್ರ ಬರೆದಿದ್ದಾರೆ. ಈ ಸಂಬಂಧ ಮೊದ್ಲು ಲೋಕಾಯುಕ್ತ ಅಧಿಕಾರಿಗಳೇ ಆಸ್ತಿಯನ್ನ ಲೋಕಾಯುಕ್ತ ವೆಬ್ ಸೈಟ್ ನಲ್ಲಿಯೇ ಘೋಷಣೆ ಮಾಡಿಕೊಂಡು ಅಧಿಕಾರಿಗಳು ಇತರರಿಗೆ ಮಾದರಿಯಾಗಲಿ ಎಂದು ಆಗ್ರಹ ಮಾಡಿದ್ದಾರೆ.
PublicNext
05/02/2025 07:52 pm