ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH : 'ಗಂಡನ ಇಂಗ್ಲೀಷ್‌ನಿಂದ ನನ್ನ ನೆಮ್ಮದಿಯೇ ಹಾಳಾಗಿದೆ' - ಕಣ್ಣೀರಿಟ್ಟ ಮಹಿಳೆ!

ನವದೆಹಲಿ: ಎಷ್ಟೇ ಎಚ್ಚರಿಕೆಯಿಂದ ಆಯ್ಕೆ ಮಾಡಿದ್ರೂ, ಮದುವೆಯ ನಂತರ ಕೆಲವು ಸಮಸ್ಯೆ ಉದ್ಭವಿಸುತ್ತವೆ. ಅನೇಕ ಜನರು ರಾಜಿ ಮಾಡಿಕೊಳ್ಳುತ್ತಾರೆ. ಕೆಲವರು ನ್ಯಾಯಾಲಯದ ಮೊರೆ ಹೋಗ್ತಾರೆ, ಆದರೆ ಒಬ್ಬ ವಿವಾಹಿತ ಮಹಿಳೆ ನ್ಯಾಯಾಲಯಕ್ಕೆ ಹೋಗಲಿಲ್ಲ, ಬದಲಾಗಿ ತನ್ನ ಪತಿ ಮಾತನಾಡುವ ಇಂಗ್ಲಿಷ್ ತನ್ನ ಜೀವನವನ್ನು ಹಾಳುಮಾಡಿದೆ ಎಂದು ಸೋಶಿಯಲ್​​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ.

ಈ ಮಹಿಳೆಯ ಹೆಸರು ಶಾಲಿನಿ ಪಂಡಿತ್, ಅವಳು ಈ ವಿಡಿಯೋವನ್ನು ಮೋಜು ಮತ್ತು ಮನರಂಜನೆಗಾಗಿ ಮಾಡಿದ್ದಾಳೆಂದು ತೋರುತ್ತದೆ. ಆದ್ರೆ ಇದರಲ್ಲಿ ಅವಳು ಅಳುತ್ತಿರುವಂತೆ ನಟನೆ ಮಾಡುತ್ತಾ ವಿಡಿಯೋ ಮಾಡಿ ಪತಿ ಇಂಗ್ಲಿಷ್​​ ಬಗ್ಗೆ ಹೇಳಿದ್ದಾಳೆ.

ತನ್ನ ಭಾವಿ ಪತಿಗೆ ಬಹಳ ದೊಡ್ಡ ಕೆಲಸವಿದೆ..ಆಟೋಮೊಬೈಲ್ ಅಂತ ಹೇಳಿದ್ದರಿಂದ, ಅವನ ಜೊತೆಗಿನ ಜೀವನ ಒಳ್ಳೆಯ ರೇಂಜ್‌ನಲ್ಲಿ ಇರುತ್ತೆ ಅಂತ ಭಾವಿಸಿ, ಮದುವೆಗೆ ಓಕೆ ಎಂದೇ..! ಆದರೆ ಅವರು ಪಂಕ್ಚರ್ ಕೆಲಸ ಮಾಡುತ್ತಾರೆ. ನಾನು ಮೂರ್ಖನಾದೆ ಎಂದು ಶಾಲಿನಿ ಅಳುತ್ತಾ ಹೇಳಿದ್ದಾಳೆ.

ಅವನು ಅದನ್ನು ಇಂಗ್ಲಿಷ್‌ನಲ್ಲಿ ಹೇಳಿದಾಗ, ಈಕೆ ತಮಾಷೆಗಾಗಿ ಹೇಳಿದ್ದರೂ, ಇಂಗ್ಲಿಷ್ ಬಾರದವರು ಇಂತಹ ಸಂದರ್ಭಗಳಲ್ಲಿ ಹೇಗೆ ತೊಂದರೆಗೆ ಸಿಲುಕುತ್ತಾರೆ ಎಂಬುದನ್ನು ಅವಳು ವಿವರಿಸಿದಳು. ಈ ವಿಡಿಯೋ ಸಖತ್​​ ವೈರಲ್​​ ಆಗಿದೆ.

Edited By : Abhishek Kamoji
PublicNext

PublicNext

05/02/2025 03:52 pm

Cinque Terre

22.88 K

Cinque Terre

0

ಸಂಬಂಧಿತ ಸುದ್ದಿ