ನವದೆಹಲಿ: ಅಕ್ರಮವಾಗಿ ನೆಲೆಸಿರುವ ಆರೋಪದಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನರನ್ನು ಅಮೆರಿಕದ ಟೆಕ್ಸಾಸ್ ನಗರದಿಂದ ಸಿ- 17 ಸೇನಾ ವಿಮಾನದ ಮೂಲಕ ಪಂಜಾಬ್‌ನ ಅಮೃತಸರಕ್ಕೆ ತಂದು ಇಳಿಸಲಾಗಿದೆ. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅಮೆರಿಕದಲ್ಲಿ ವಲಸೆ ನೀತಿಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಹೀಗೆ ಭಾರತೀಯ ವಲಸಿಗರನ್ನು ಕಳುಹಿಸುವಾಗ ಅವರ ಕೈಗೆ ಕೋಳ ಹಾಕಲಾಗಿದೆ. ಕೆಲವರ ಕಾಲಿಗೂ ಬೇಡಿ ಹಾಕಲಾಗಿದೆ. ಈ ಮೂಲಕ ಅಮೆರಿಕ ಭಾರತೀಯ ವಲಸಿಗರನ್ನು ಅಮಾನವೀಯವಾಗಿ ನಡೆಸಿಕೊಂಡಿದೆ. ಇಂಥ ಕ್ರಮ ಕೈಗೊಂಡ ಅಮೆರಿಕ, ಅಕ್ರಮ ವಲಸಿಗರನ್ನು ಹುಡುಕಿ ಹೊರಹಾಕುತ್ತೇವೆ. ವಲಸೆ ನೀತಿಯನ್ನು ಬಿಗಿಗೊಳಿಸುತ್ತೇವೆ ಎಂದು ಹೇಳಿದೆ.
PublicNext
05/02/2025 10:55 pm