", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/43595620250205034021filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ಗಡಿ ಭಾಗದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಪೈವಳಿಕೆ ಕಳಾಯಿ ಎಂಬಲ್ಲಿನ ಸಂಜೀವ ಶೆಟ್ಟಿ ಎಂಬವರ ಮನೆಯಿಂದ ಏಳು ಪವನ್ ಚಿನ್ನಾಭರಣ ಹಾ...Read more" } ", "keywords": "Node,Mangalore,Crime", "url": "https://publicnext.com/node" }
ಮಂಗಳೂರು: ಗಡಿ ಭಾಗದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಪೈವಳಿಕೆ ಕಳಾಯಿ ಎಂಬಲ್ಲಿನ ಸಂಜೀವ ಶೆಟ್ಟಿ ಎಂಬವರ ಮನೆಯಿಂದ ಏಳು ಪವನ್ ಚಿನ್ನಾಭರಣ ಹಾಗೂ ಒಂದು ಲಕ್ಷ ರೂ. ಕಳವು ಗೈದ 2 ಪ್ರಕರಣಕ್ಕೆ ಸಂಬಂಧಪಟ್ಟಂತೆ ಮನೆ ಕೆಲಸಕ್ಕಿದ್ದ ಮೈಸೂರು ಮೂಲದ - ವ್ಯಕ್ತಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೈಸೂರಿನ ಯಶವಂತ ಕುಮಾರ್ ( 38) ಎಂದು ಗುರುತಿಸಲಾಗಿದೆ. ಸಂಜೀವ ಶೆಟ್ಟಿ ಮಾತ್ರ ಮನೆಯಲ್ಲಿದ್ದ ವೇಳೆ ಕಳವು ಮಾಡಲಾಗಿತ್ತು. ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನಾಭರಣ ಇಟ್ಟ ಆರೋಪಿ, ಜ.28ರಂದು ಚಿನ್ನಾಭರಣ ಸಹಿತ ಊರಿಗೆ ತೆರಳಿದ್ದನು. ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿದ್ದ, ಸಂಜೀವ ಶೆಟ್ಟಿಯವರ ಪುತ್ರ ಅಶೋಕ್ ಕುಮಾರ್ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿತ್ತು.
ಬಳಿಕ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿತ್ತು. ಯಶವಂತ ಕುಮಾರ್ 10 ತಿಂಗಳಿನಿಂದ ಸಂಜೀವ ಶೆಟ್ಟಿಯವರ ಮನೆಯಲ್ಲಿ ಕೃಷಿ ಹಾಗೂ ಮನೆ ಕೆಲಸ ನಿರ್ವಹಿಸುತ್ತಿದ್ದನು.
Kshetra Samachara
05/02/2025 03:40 pm