", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/52563-1738754543-Untitled-design-(66).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು : ಜಾರಿ ನಿರ್ದೇಶನಾಲಯದ ಸೋಗಿನಲ್ಲಿ ಬಂಟ್ವಾಳ ತಾಲೂಕಿನ ನಾರ್ಶ ಎಂಬಲ್ಲಿನ ಮನೆಯೊಂದಕ್ಕೆ ದಾಳಿ ನಡೆಸಿ 30ಲಕ್ಷ ರೂ. ದರೋಡೆ ನಡೆಸಿದ ಮೂವರ...Read more" } ", "keywords": "Mangaluru: House robbery under the guise of Enforcement Directorate - Khaki beats up three cunning officials,Udupi,Mangalore,Crime", "url": "https://publicnext.com/node" }
ಮಂಗಳೂರು : ಜಾರಿ ನಿರ್ದೇಶನಾಲಯದ ಸೋಗಿನಲ್ಲಿ ಬಂಟ್ವಾಳ ತಾಲೂಕಿನ ನಾರ್ಶ ಎಂಬಲ್ಲಿನ ಮನೆಯೊಂದಕ್ಕೆ ದಾಳಿ ನಡೆಸಿ 30ಲಕ್ಷ ರೂ. ದರೋಡೆ ನಡೆಸಿದ ಮೂವರು ಚಾಲಾಕಿ ಖದೀಮರನ್ನು ಖಾಕಿ ಪಡೆ ಖೆಡ್ಡಾಕ್ಕೆ ಕೆಡವಿದೆ.
ಜನವರಿ 3ರಂದು ಘಟನೆ ನಡೆದಿದ್ದರೂ, ಯಾವುದೇ ಸುಳಿವು ಇಲ್ಲದೆ ದರೋಡೆ ಪ್ರಕರಣ ಕಗ್ಗಂಟಾಗಿತ್ತು. ಇದೀಗ ಪ್ರಕರಣವನ್ನು ಭೇದಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಕೇರಳ ಮೂಲದ ಮೂವರು ಚಾಲಾಕಿ ಖದೀಮರನ್ನು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ.
ಕೇರಳ ಕೊಲ್ಲಂ ನಿವಾಸಿಗಳಾದ ಅನೀಲ್ ಫರ್ನಾಂಡಿಸ್, ಸಚೀನ್, ಶಬೀನ್ ಬಂಧಿತ ಆರೋಪಿಗಳು.ಬಸಚಿನ್‌ನನ್ನು ಮುಂಬಯಿ ಹಾಗೂ ಶಬೀನ್‌ನನ್ನು ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ದರೋಡೆಕೋರರು ದೇಶ ಬಿಟ್ಟು ಪರಾರಿಯಾಗಲು ಪ್ಲಾನ್ ಮಾಡಿದ್ದರು ಎಂದು ತಿಳಿದು ಬಂದಿದೆ.
ದರೋಡೆಕೋರರು ಇಡಿ ಅಧಿಕಾರಿಗಳು ಎಂದು ನಂಬಿಸಿ ಹಲವಾರು ಉದ್ಯಮ ನಡೆಸುತ್ತಿರುವ ಸಿಂಗಾರಿ ಬೀಡಿ ಉದ್ಯಮದ ಮಾಲಕ ಸುಲೈಮಾನ್ ಹಾಜಿಯವರ ಮನೆಗೆ ಜ.3ರಂದು ತಡರಾತ್ರಿ ದಾಳಿ ನಡೆಸಿದ್ದರು. ತಮಿಳುನಾಡು ರಾಜ್ಯದ ನಂಬರ್ ಪ್ಲೇಟ್ ಇದ್ದ ಎರಡು ಕಾರುಗಳಲ್ಲಿ ಆಗಮಿಸಿದ್ದರು. ಈ ವೇಳೆ ಎರಡು ಗಂಟೆಗಳವರೆಗೆ ತನಿಖೆ ಎಂದು ನಂಬಿಸಿ ಮನೆಯಲ್ಲಿದ್ದ ಬರೋಬ್ಬರಿ 30ಲಕ್ಷಕ್ಕೂ ಅಧಿಕ ನಗ - ನಗದು ದೋಚಿ ಪರಾರಿಯಾಗಿದ್ದರು.
Kshetra Samachara
05/02/2025 04:52 pm