", "articleSection": "Infrastructure,Human Stories", "image": { "@type": "ImageObject", "url": "https://prod.cdn.publicnext.com/s3fs-public/378325-1738749290-3.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಾರ್ಕಳ: ಇದು ಆಡಳಿತ ವ್ಯವಸ್ಥೆಗೆ ಖಂಡಿತ ಹೆಮ್ಮೆ ತರುವಂತಹ ವಿಚಾರವಲ್ಲ. ಬದಲಾಗಿ ಕಾರ್ಕಳ ತಾಲೂಕಿನ ಗ್ರಾಮೀಣ ಪ್ರದೇಶದ ಆಡಳಿತ ವೈಫಲ್ಯಕ್ಕೆ ಹಿಡಿ...Read more" } ", "keywords": "Karkala, Appiyannana, Solo Elderly, Road Repair, Village Development, Karnataka News, Udupi News, Inspirational Story, Social Service, Elderly Hero.,Udupi,Mangalore,Infrastructure,Human-Stories", "url": "https://publicnext.com/node" }
ಕಾರ್ಕಳ: ಇದು ಆಡಳಿತ ವ್ಯವಸ್ಥೆಗೆ ಖಂಡಿತ ಹೆಮ್ಮೆ ತರುವಂತಹ ವಿಚಾರವಲ್ಲ. ಬದಲಾಗಿ ಕಾರ್ಕಳ ತಾಲೂಕಿನ ಗ್ರಾಮೀಣ ಪ್ರದೇಶದ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ. ಯಾಕಂದರೆ ಆಜೆಕಾರಿನ ಈ ವೃದ್ಧ ತನ್ನೂರಿನ ರಸ್ತೆಯನ್ನು ಹಲವು ವರ್ಷಗಳಿಂದ ದುರಸ್ತಿಪಡಿಸುತ್ತಿದ್ದಾರೆ. ಅದೂ ಏಕಾಂಗಿಯಾಗಿ.. ಆದರೆ ಅಲ್ಲಿನ ಗ್ರಾಮ ಪಂಚಾಯತ್ ಸೇರಿದಂತೆ, ತಾಲೂಕು ಆಡಳಿತ ಮಾತ್ರ ತಮಗೂ ಈ ವಿಚಾರಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದೆ.
ಅಜೆಕಾರಿನ ಮರ್ಣೆ ಗ್ರಾಮದಿಂದ ದೊಂಬರಪಲ್ಕೆಗೆ ಹೋಗುವ ಮಣ್ಣಿನ ರಸ್ತೆ ದಶಕಗಳಿಂದಲೂ ದುಸ್ಥಿತಿಯಲ್ಲಿದೆ. ಮಳೆ ಬಂದಾಗ ರಸ್ತೆ ಸಂಪೂರ್ಣವಾಗಿ ಹಾಳಾಗಿ, ಇಲ್ಲಿ ರಸ್ತೆಯೇ ಇಲ್ಲವೇನೊ ಅನ್ನುವ ಪರಿಸ್ಥಿತಿಗೆ ತಲುಪುತ್ತದೆ.ಸಂಚಾರ ವ್ಯವಸ್ಥೆಗೆ ಅಡಚಣೆಯಾಗಿ ಸ್ಥಳೀಯರು ತೊಂದರೆ ಅನುಭವಿಸುತ್ತಾರೆ. ಇದನ್ನು ನೋಡಿದ 80 ವರ್ಷ ಪ್ರಾಯದ ಅಪ್ಪಿಯಣ್ಣ, ತಾನೇ ಹಾರೆ-ಪಿಕ್ಕಾಸು ಹಿಡಿದು ರಸ್ತೆ ದುರಸ್ತಿ ಮಾಡಲು ಪ್ರಾರಂಭಿಸಿದರು. ಕಳೆದ ಹಲವು ವರ್ಷಗಳಿಂದ ಅವರು ಸ್ವಂತ ಶ್ರಮದಿಂದ ಮಣ್ಣು ತುಂಬಿ, ಚರಂಡಿ ಕಟ್ಟಿ, ರಸ್ತೆ ಸುಧಾರಿಸುತ್ತಿದ್ದಾರೆ.
ಒಂದು ಚಿಕ್ಕ ಗುಂಡಿ ಬಿದ್ದರೂ ಅಪ್ಪಿಯಣ್ಣ ಅಲರ್ಟ್ ಆಗುತ್ತಾರೆ. ನೇರವಾಗಿ ದುರಸ್ತಿಗೆ ಮುಂದಾಗುತ್ತಾರೆ. ಮಳೆಗಾಲದಲ್ಲಿ ಈ ವೃದ್ಧ ಮನೆಯಲ್ಲಿರುವುದಕ್ಕಿಂತ ಮಳೆಯಲ್ಲೇ ರಸ್ತೆ ಸರಿ ಪಡಿಸುತ್ತ ಕಾಲ ಕಳೆಯೋದೇ ಹೆಚ್ಚು.
ಕಾರ್ಕಳ ತಾಲೂಕಿಗೆ 2024-25ರಲ್ಲಿ ನರೇಗಾ ಯೋಜನೆಯಡಿ 670.35 ಲಕ್ಷ ರೂಪಾಯಿ ಬಿಡುಗಡೆಯಾಗಿತ್ತು.ಮರ್ಣೆ ಗ್ರಾಮಪಂಚಾಯತ್ ಗೆ 23.5 ಲಕ್ಷ ರೂಪಾಯಿ ಹಂಚಿಕೆಯಾಗಿದೆ . ಆದರೂ, ದೊಂಬರಪಲ್ಕೆ ರಸ್ತೆ ಅಭಿವೃದ್ಧಿಗೆ ಚಿಕ್ಕಾಸು ಅನುದಾನ ಸಿಗಲಿಲ್ಲ. ನಾನು ಸಾಯುವ ಮೊದಲು ಈ ರಸ್ತೆಗೆ ಡಾಂಬರು ಬೀಳಲಿ ಎನ್ನುವುದೇ ನನ್ನ ಕನಸು ಎನ್ನುತ್ತಾರೆ ಅಪ್ಪಿಯಣ್ಣ. ಕಾರ್ಕಳ ಶಾಸಕ ಸುನೀಲ್ ಕುಮಾರ್ ಅಪ್ಪಿಯಣ್ಣನ ಈ ಸಾಹಸಕ್ಕೆ ಭೇಷ್ ಅನ್ನದಿದ್ದರೂ ಪರವಾಗಿಲ್ಲ ,ಆದರೆ ಆದಷ್ಟು ಬೇಗ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.
PublicNext
05/02/2025 03:24 pm