", "articleSection": "Politics,Infrastructure,WaterPower,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738651809-A1~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Umesh Mangalore" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ಸರ್ಕಾರದ ವಿರುದ್ಧ ಪುತ್ತೂರು ಶಾಸಕ ಅಶೋಕ್ ರೈ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರದ ಪ್ರಮುಖ ನೀರಾವರಿ ಯೋಜನೆಯಾದ ಎತ್ತಿನಹೊಳೆ ಯೋಜನೆಯ...Read more" } ", "keywords": ",Udupi,Mangalore,Politics,Infrastructure,WaterPower,News,Public-News", "url": "https://publicnext.com/node" }
ಮಂಗಳೂರು: ಸರ್ಕಾರದ ವಿರುದ್ಧ ಪುತ್ತೂರು ಶಾಸಕ ಅಶೋಕ್ ರೈ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರದ ಪ್ರಮುಖ ನೀರಾವರಿ ಯೋಜನೆಯಾದ ಎತ್ತಿನಹೊಳೆ ಯೋಜನೆಯನ್ನ ವಿರೋಧಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸರ್ಕಾರ ಎತ್ತಿನಹೊಳೆ ಯೋಜನೆಗೆ 24 ಸಾವಿರ ಕೋಟಿ ಕೊಡ್ತೀರಿ? ಪಶ್ಚಿಮ ವಾಹಿನಿ ಯೋಜನೆಗೆ ನೀವು ಹಣ ಇಲ್ಲ ಹೇಳ್ತೀರಿ. ಹಾಗಾದ್ರೆ ನಮಗೆ ಏನಿದೆ ಸ್ವಾಮಿ? ಎತ್ತಿನಹೊಳೆಗೆ ನೀರು ಹರಿಸಿದರೆ ನಮಗೆ ನೀರಿನ ಸಮಸ್ಯೆ ಖಂಡಿತ ಎದುರಾಗುತ್ತೆ.
ಮುಂದಿನ 15 ವರ್ಷಗಳಲ್ಲಿ ಕರಾವಳಿಯಲ್ಲಿ ನೀರಿನ ಬರ ಎದುರಾಗುತ್ತೆ. ಎತ್ತಿನ ಹೊಳೆ ಯೋಜನೆಯ ಕುರಿತಂತೆ 45 ಶಾಸಕರ ಸಭೆ ಕರೆದಿದ್ರು. ನಾನೊಬ್ಬನೇ ನದಿ ತೀರದಲ್ಲಿರೋ ಶಾಸಕ. ಉಳಿದೆಲ್ಲ ಶಾಸಕರು ಸಮುದ್ರ ಮತ್ತು ಇತರ ಭಾಗದವರು. ನಮಗೆ ಶಾಶ್ವತ ನೀರು ಸಿಗುವ ಎರಡು ಯೋಜನೆಗಳನ್ನ ಸರ್ಕಾರದ ಮುಂದಿಟ್ಟಿದ್ದೇನೆ. ಉಪ್ಪಿನಂಗಡಿಯಲ್ಲಿ 151 ಕೋಟಿ ವೆಚ್ಚದ ಡ್ಯಾಂ, ಕಠಾರದಲ್ಲಿ 250 ಕೋಟಿ ವೆಚ್ಚದ ಡ್ಯಾಂ, ಈ ಎರಡು ಡ್ಯಾಂಗಳು ನಿರ್ಮಾಣವಾದ್ರೆ ನಮಗೆ ನೀರಿನ ಸಮಸ್ಯೆ ಬರಲ್ಲ ಎಂದು ಎತ್ತಿನಹೊಳೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಅಶೋಕ್ ರೈ ಅಸಮಾಧಾನ ವ್ಯಕ್ತಪಡಿಸಿದರು.
PublicNext
04/02/2025 12:20 pm