ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಟ್ಟೂರು: ಶ್ರೀ ಗುರುಕೊಟ್ಟೂರೇಶ್ವರ ರಥದ ತೇರುಗಾಲಿ ಹೊರಕ್ಕೆ

ಕೊಟ್ಟೂರು: ಪಟ್ಟಣದ ಆರಾಧ್ಯ ದೈವ ಶ್ರೀ ಗುರುಬಸವೇಶ್ವರ ಸ್ವಾಮಿಯ ಮಹಾರಥೋತ್ಸವದ ಪ್ರಯುಕ್ತ ತೇರು ಗಾಲಿಯನ್ನು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಹೊರಗೆ ಹಾಕಿದರು. ಫೆಬ್ರವರಿ 22ರಂದು ವಿಜೃಂಭಣೆಯಿಂದ ಜರುಗಲಿರುವ ಮಹಾರಥೋತ್ಸವದ ಪ್ರಯುಕ್ತ ಹಿರೇಮಠದಿಂದ ವಾದ್ಯ ಮೇಳದೊಂದಿಗೆ ತೇರು ಗಡ್ಡೆಯಿಂದ ಬಸ್ ನಿಲ್ದಾಣದ ಹತ್ತಿರ ಬಂದು ಸುಸೂತ್ರವಾಗಿ ತಲುಪಿತು.

ಸಕಲ ಬಿರುದಾವಳಿಗಳ ಮೂಲಕ ನೆರೆದಿದ್ದ ಶ್ರೀ ಸ್ವಾಮಿಯ ಭಕ್ತರು ಶ್ರೀಗುರು ಕೊಟ್ಟೂರು ದೊರೆಯೇ ನಿನಗಾರು ಸರಿಯೇ... ಸರಿ ಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್... ಎಂಬ ಜಯಘೋಷ ಮೊಳಗಿಸುತ್ತ ರಥದ ಗಡ್ಡೆಯನ್ನು ಹೊರಹಾಕಲಾಯಿತು.

ಕ್ರಿಯಾಮೂರ್ತಿಗಳಾದ ಶ್ರೀ ಶಿವಪ್ರಕಾಶ ದೇವರು ರಥದ ಗಡ್ಡೆಯನ್ನು ಹತ್ತಿ ಕೊಟ್ಟೂರು ಬಸವೇಶ್ವರನ ಜಾತ್ರೆ ಅದ್ದೂರಿಯಾಗಿ ಜರುಗಲಿ. ಅದರ ಭಾಗವಾಗಿ ಇಂದು ತೇರುಗಾಲಿ ಹೊರಹಾಕಲಾಗಿದೆ ಅಂತ ಹೇಳಿದ್ರು. ಬಳಿಕ ಶ್ರೀ ಸ್ವಾಮಿಗೆ ಕಂಕಣಧಾರಣೆ, ರಾತ್ರಿ ರಥದ ಹತ್ತಿರ ಗುಗ್ಗರಿ ಪೂಜೆ ಕಾರ್ಯ ನಡೆಯಲಿದ್ದು, ಜಾತ್ರಾ ದಿನದವರೆಗೂ ಪ್ರತಿನಿತ್ಯ ಪೂಜಾ ಕೈಂಕರ್ಯಗಳು ಜರುಗಲಿವೆ.

Edited By : Manjunath H D
PublicNext

PublicNext

03/02/2025 08:23 pm

Cinque Terre

22.97 K

Cinque Terre

0

ಸಂಬಂಧಿತ ಸುದ್ದಿ