", "articleSection": "Cultural Activity,Government", "image": { "@type": "ImageObject", "url": "https://prod.cdn.publicnext.com/s3fs-public/418299-1737880032-pade.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯನಗರ : ದೇಶದ ಅತಿ ದೊಡ್ಡ 405 ಅಡಿ ಎತ್ತರದ ಧ್ವಜಸ್ಥಂಭದಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ....Read more" } ", "keywords": "Vijayanagara News, 76th Republic Day, Minister Jamir Ahmed, Flag Hoisting Ceremony, Karnataka Celebrations, Indian Republic Day, Patriotic Events, National Festivals, Vijayanagara District.,Vijayanagara,Cultural-Activity,Government", "url": "https://publicnext.com/node" } ವಿಜಯನಗರ : 76ನೇ ಗಣರಾಜ್ಯೋತ್ಸವ- ಧ್ವಜಾರೋಹಣ ನೆರವೇರಿಸಿದ ಸಚಿವ ಜಮೀರ್ ಅಹ್ಮದ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : 76ನೇ ಗಣರಾಜ್ಯೋತ್ಸವ- ಧ್ವಜಾರೋಹಣ ನೆರವೇರಿಸಿದ ಸಚಿವ ಜಮೀರ್ ಅಹ್ಮದ್

ವಿಜಯನಗರ : ದೇಶದ ಅತಿ ದೊಡ್ಡ 405 ಅಡಿ ಎತ್ತರದ ಧ್ವಜಸ್ಥಂಭದಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್ ಜಮೀರ್ ಅಹ್ಮದ್ ಖಾನ್ ನೆರವೇರಿಸಿದ್ರು.

ಹೊಸಪೇಟೆ ತಾಲೂಕಿನಲ್ಲಿರೋ ಪುನೀತ್ ಜಿಲ್ಲಾ ಕ್ರೀಡಾ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಬಳಿಕ ಮಾತನಾಡಿದ ಸಚಿವ ಜಮೀರ್ ಅಹ್ಮದ್, ಭಾರತಾಂಬೆಯನ್ನ ಇಡೀ ದೇಶದ ಜನ ಸಂಭ್ರಮಿಸ್ತಿದ್ದಾರೆ. 76 ಗಣರಾಜ್ಯೋತ್ಸವ ಆಚರಣೆ ಮಾಡ್ತಿರೋದು ಹೆಮ್ಮೆಯ ವಿಚಾರ ಅಂತ ಹೇಳಿದ್ರು. 76ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹೊಸಪೇಟೆಯ ಸ್ಥಳೀಯ ಶಾಸಕ ಎಚ್.ಆರ್ ಗವಿಯಪ್ಪ ಗೈರಾಗಿದ್ದು ಕಂಡುಬಂತು.

ಬಳಿಕ ವಿವಿಧ ಪಡೆಗಳಾದ ಪೊಲೀಸ್, NCC, ಸ್ಕೌಟ್ ಆ್ಯಂಡ್ ಗೈಡ್ಸ್, ಮಹಿಳಾ ಪಡೆ, ಶಾಲಾ ಮಕ್ಕಳು ಸೇರಿ ಹತ್ತು ಪಡೆಗಳಿಗೆ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಗೌರವ ವಂದನೆ ಸಲ್ಲಿಸಿದ್ರು. ಬಳಿಕ ವಿವಿಧ ಪಡೆಗಳಿಂದ ಕವಾಯತು ನಡೆಯಿತು.

ವೇದಿಕೆಯಲ್ಲಿ ಹೂಡಾ ಅಧ್ಯಕ್ಷ ಇಮಾಮ್, ಹೊಸಪೇಟೆ ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಡಿಸಿ ದಿವಾಕರ್, ಎಸ್.ಪಿ ಶ್ರೀಹರಿಬಾಬು ಸೇರಿ ಇತರರು ಹಾಜರಿದ್ರು.

Edited By : Ashok M
PublicNext

PublicNext

26/01/2025 01:57 pm

Cinque Terre

23.23 K

Cinque Terre

0

ಸಂಬಂಧಿತ ಸುದ್ದಿ