ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಎಂ.ಎಂ.ಜೋಶಿ ಅಮೃತ ಹಸ್ತದಿಂದ 'ಅಮ್ಮ ಆಪ್ಟಿಕಲ್' ಉದ್ಘಾಟನೆ

ಹುಬ್ಬಳ್ಳಿ : ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಸಂಸ್ಥಾಪಕ ಎಂ.ಎಂ.ಜೋಶಿ ಅಮೃತ ಹಸ್ತದಿಂದ ಅಮ್ಮ ಆಪ್ಟಿಕಲ್ ನೂತನ ಶಾಖೆ ಹುಬ್ಬಳ್ಳಿಯಲ್ಲಿ ಆರಂಭವಾಗಿದೆ.

ಹುಬ್ಬಳ್ಳಿ ಹೊಸೂರು ಕೆನರಾ ಹೊಟೇಲ್ ಪಕ್ಕದಲ್ಲಿ ಚನ್ನಪ್ಪ ಕಮಡೊಳ್ಳಿ ಪುತ್ರ ಮಲ್ಲಿಕಾರ್ಜುನ ಕಮಡೊಳ್ಳಿಯವರು ಆರಂಭಿಸಿದ ಅಮ್ಮ ಆಪ್ಟಿಕಲ್ ನೂತನ 'ನೇತ್ರ ತಪಾಸಣೆ ಮತ್ತು ಗುಣಮಟ್ಟದ ಕನ್ನಡಕ ವಿತರಣೆ' ಮಳಿಗೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಎಂ.ಎಂ.ಜೋಶಿಯವರು ಉದ್ಘಾಟನೆ ಮಾಡಿ ಶುಭ ಹಾರೈಸಿದರು.

ಅಮ್ಮ ಆಪ್ಟಿಕಲ್ ನೂತನ ಮಳಿಗೆ ಉದ್ಘಾಟನೆ ಸಮಾರಂಭದ ದಿವ್ಯ ಸಾನಿಧ್ಯವನ್ನು ನವನಗರ ಪಂಚಾಚಾರ್ಯ ಪುಣ್ಯಾಶ್ರಮದ ಷಟಸ್ಥಲ ಬ್ರಹ್ಮ ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಕಲ್ಯಾಣಪುರ ಮಠದ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು ವಹಿಸಿ ಆಗಮಿಸಿ ಶುಭ ಹಾರೈಸಿದ್ರೆ ಎಂ.ಎಂ‌.ಜೋಶಿ ಪುತ್ರ ಡಾ.ಶ್ರೀನಿವಾಸ್ ಜೋಶಿ ಮಳಿಗೆಗೆ ಭೇಟಿ ನೀಡಿದರು.

ಕಿಮ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಎಫ್.ಕಮ್ಮಾರ್ ಮತ್ತು ಸಹ ಅಧಿಕಾರಿಗಳು ರಾಜಶೇಖರ ದ್ಯಾಬೇರಿಯವರು ಆಗಮಿಸಿ ಅಮ್ಮ ಆಪ್ಟಿಕಲ್'ಗೆ ಶುಭ ಕೋರಿದರು.

ವಿಶೇಷವಾಗಿ ಹುಬ್ಬಳ್ಳಿ, ಧಾರವಾಡ, ಕುಂದಗೋಳ ಸೇರಿದಂತೆ ವಿವಿಧ ಮುಖಂಡರು ಅಮ್ಮ ಆಪ್ಟಿಕಲ್ ನೂತನ ಮಳಿಗೆಗೆ ಆಗಮಿಸಿ ಶುಭ ಕೋರಿ ಚನ್ನಪ್ಪ ಕಮಡೊಳ್ಳಿ, ಪುತ್ರ ಮಲ್ಲಿಕಾರ್ಜುನ ಕಮಡೊಳ್ಳಿಯವರು ನೀಡುವ ಸನ್ಮಾನ ಗೌರವಕ್ಕೆ ಪಾತ್ರರಾದರು.

Edited By : Manjunath H D
Kshetra Samachara

Kshetra Samachara

03/02/2025 03:05 pm

Cinque Terre

16.92 K

Cinque Terre

1

ಸಂಬಂಧಿತ ಸುದ್ದಿ