", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/462628-1738573635-jjjjjj.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ಇತ್ತೀಚೆಗೆ ಕೊಟ್ಟಾರ ದೇರೆಬೈಲ್, ದಡ್ಡಲಕಾಡ್‌ನಲ್ಲಿ ಬ್ರಹ್ಮರಾಕ್ಷಸ ಉಚ್ಚಾಟನೆ ನಡೆದ ಬೆನ್ನಲ್ಲೇ ಮತ್ತೆ ದ.ಕ.ಜಲ್ಲೆಯ ಮೂಡಬಿದಿರೆಯಲ್ಲ...Read more" } ", "keywords": "Brahmarakshasa, Moodabidri, Dakshina Kannada, Karnataka News, Indian News, Mystery, Suspense, Brahmarakshasa Sighting, Paranormal Activity, Supernatural Phenomenon, Ghostly Encounter, Unexplained Events, Dakshina Kannada District, Karnataka District, Indian District, Moodabidri News, Local News, Regional News, Brahmarakshasa Legend, Folklore, Mythology, Karnataka Folklore, Indian Folklore,,Udupi,Mangalore,Religion", "url": "https://publicnext.com/node" }
ಮಂಗಳೂರು: ಇತ್ತೀಚೆಗೆ ಕೊಟ್ಟಾರ ದೇರೆಬೈಲ್, ದಡ್ಡಲಕಾಡ್‌ನಲ್ಲಿ ಬ್ರಹ್ಮರಾಕ್ಷಸ ಉಚ್ಚಾಟನೆ ನಡೆದ ಬೆನ್ನಲ್ಲೇ ಮತ್ತೆ ದ.ಕ.ಜಲ್ಲೆಯ ಮೂಡಬಿದಿರೆಯಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಯುವಕರಿಗೆ ಬ್ರಹ್ಮರಾಕ್ಷಸ ಗೋಚರಿಸಿದೆ ಎಂಬ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಬೈಕ್ ನಲ್ಲಿ ಸಂಚರಿಸುತ್ತಿದ್ದ ಮನೋಹರ್, ಕೌಶಿಕ್ ಹಾಗೂ ರವಿ ಎಂಬ ಮೂವರು ಯುವಕರು ಬೈಕ್‌ನಲ್ಲಿ ರಾತ್ರಿ 11ಗಂಟೆ ಸುಮಾರಿಗೆ ತ್ರಿಬಲ್ ರೈಡಿಂಗ್ ಮಾಡುತ್ತಿದ್ದರು. ಈ ವೇಳೆ ಅವಧಿಗೆ ಎರಡು ಬೆಳಕಿನ ಉಂಡೆ ಗೋಚರವಾಗಿದೆ. ಅವರಿಗೆ ಆ ಬೆಳಕಿನ ಉಂಡೆ ಬೆನ್ನಟ್ಟಿದಂತೆ ಭಾಸವಾಗಿದೆ.
ಈ ಬಗ್ಗೆ ಮನೋಹರ್ ಎಂಬ ಯುವಕ ಮತ್ತೋರ್ವನೊಂದಿಗೆ ತುಳುಭಾಷೆಯಲ್ಲಿ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ''ತನ್ನ ಸವಾರಿಗೆ ಅಡ್ಡಬಂದಿದ್ದೇವೆ ಎಂದು ಬ್ರಹ್ಮರಾಕ್ಷಸ ನಮ್ಮನ್ನು ಹಿಂಬಾಲಿಸಿದೆ. ಕೋಟೆಬಾಗಿಲಿನಿಂದ ಮಹಾವೀರ ಕಾಲೇಜ್‌ಗೆ ಹೋಗುವ ರಸ್ತೆಯ ಬಳಿ ಎರಡು ಬೆಳಕು ಕಾಣಿಸಿದೆ. ಹೊಸಂಗಡಿ ಸೇತುವೆ ಸಮೀಪದ ತಿರುವಿನಲ್ಲಿ ಎರಡು ಉಂಡೆಗಳು ಬೃಹದಾಕಾರವಾಗುತ್ತಾ ಒಂದಾಯಿತು. ಈ ವೇಳೆ ಬೈಕ್ ಮಗುಚಿಬಿದ್ದು ನಾವು ರಸ್ತೆಗೆ ಬಿದ್ದಿದ್ದೇವೆ. ಬಳಿಕ ಎದ್ದು ವೇಣೂರು ಕಡೆಗೆ ಹೋಗಿದ್ದೇವೆ. ಪಡ್ಯಾರಬೆಟ್ಟು ಶ್ರೀ ಕೊಡಮಣಿತ್ತಾಯ ದೈವದ ಕಾರ್ಣಿಕದಿಂದ ಬಚಾವ್ ಆಗಿದ್ದೇವೆ ಎಂದು ಹೇಳಿರುವ ಆಡಿಯೋ ವೈರಲ್ ಆಗಿದೆ
PublicNext
03/02/2025 02:37 pm