ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ರಥಸಪ್ತಮಿ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ಅರ್ಚಕರಿಂದ ಪ್ರಾತಕಾಲ ವಿಶೇಷ ಪ್ರಾರ್ಥನೆ, ಪಲ್ಲಕ್ಕಿಯಲ್ಲಿ ಶ್ರೀ ದೇವರನ್ನು ಕುಳ್ಳಿರಿಸಿ ವಿವಿಧ ವಾದ್ಯಗೋಷ್ಠಿಯೊಂದಿಗೆ ಶಾಂಭವಿ ನದಿ ತೀರದಲ್ಲಿ ಶ್ರೀ ದೇವರ ನದಿ ಸ್ನಾನ ನಡೆಯಿತು. ಬಳಿಕ ಶ್ರೀ ದೇವರ ಪೇಟೆ ಸವಾರಿ, ದೇವಸ್ಥಾನದಲ್ಲಿ ರಥೋತ್ಸವ,, ನಿತ್ಯೋತ್ಸವ, ಬೆಳ್ಳಿರಥೋತ್ಸವ, ವಸಂತ ಪೂಜೆ ನಡೆಯಿತು.
ಮಧ್ಯಾಹ್ನ ಮಹಾಪೂಜೆ, ಸಾನಿಧ್ಯ ಹವನ, ಮಹಾ ನೈವೇದ್ಯ, ಮಂಗಳಾರತಿ ನಡೆಯಿತು. ರಾತ್ರಿ ದೀಪಾರಾಧನೆ, ರಥೋತ್ಸವ, ನಿತ್ಯೋತ್ಸವ, ಭಂಡಿ ಗರುಡೋತ್ಸವ, ಭೂರಿ ಸಮಾರಾಧನೆ ನಡೆಯಲಿದೆ. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
04/02/2025 02:37 pm