", "articleSection": "Crime,Law and Order,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738568367-A1~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉಡುಪಿ: ನಕ್ಸಲ್ ಚಳುವಳಿ ತಪ್ಪು ಅಂತ ನನ್ನ ಮನಸ್ಸಿಗೆ ಅನಿಸಿದ ಕ್ಷಣದಿಂದಲೇ ನಾನು ಅದರಿಂದ ಹೊರಬಂದೆ. ಈಗ ನನ್ನ ಮೇಲೆ ಯಾವುದೇ ಕೇಸ್ ಗಳಿಲ್ಲ. 200...Read more" } ", "keywords": "Naxals in Karnataka, Karnataka Naxal problem, Naxalism in Karnataka, Karnataka Maoist insurgency, Anti Naxal operations in Karnataka, Karnataka Naxal affected areas, Naxal violence in Karnataka, Karnataka Naxal news, Naxal movement in Karnataka, Karnataka Red corridor, Naxalites in Karnataka, Left wing extremism in Karnataka.,Udupi,Mangalore,Crime,Law-and-Order,Government,News,Public-News", "url": "https://publicnext.com/node" }
ಉಡುಪಿ: ನಕ್ಸಲ್ ಚಳುವಳಿ ತಪ್ಪು ಅಂತ ನನ್ನ ಮನಸ್ಸಿಗೆ ಅನಿಸಿದ ಕ್ಷಣದಿಂದಲೇ ನಾನು ಅದರಿಂದ ಹೊರಬಂದೆ. ಈಗ ನನ್ನ ಮೇಲೆ ಯಾವುದೇ ಕೇಸ್ ಗಳಿಲ್ಲ. 2009 ರಲ್ಲಿ ನಕ್ಸಲ್ ಚಳವಳಿ ತೊರೆದು ಆಂಧ್ರಪ್ರದೇಶದ ಸರ್ಕಾರದ ಮುಂದೆ ಶರಣಾದೆ. ನನ್ನ ಮೇಲೆ ಇದ್ದ ಎಲ್ಲಾ ಕೇಸುಗಳನ್ನು ಆಂಧ್ರ ಸರ್ಕಾರ ತೆಗೆದು ಹಾಕಿದೆ ಎಂದು ಮುಖ್ಯವಾಹಿನಿಗೆ ಬಂದ ಮಾಜಿ ನಕ್ಸಲ್ ತೊಂಬಟ್ಟು ಲಕ್ಷ್ಮೀ ಅವರ ಪತಿ ಸಂಜೀವ ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು ,ನಾನು ಕರ್ನಾಟಕದ ಪಾವಗಡದವನು.ಕಳೆದ ಹಲವಾರು ವರ್ಷಗಳಿಂದ ಆಂಧ್ರದಲ್ಲಿ ನೆಲೆಸಿದ್ದೇನೆ. ಈಗ ನನ್ನ ಸಂಸಾರ ಸಹ ಅಲ್ಲೇ ನೆಲೆಸಿದೆ.ನನ್ನ ಪತ್ನಿ ಲಕ್ಷ್ಮೀ 2006 ರಿಂದ ನಕ್ಸಲ್ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದಳು. 2008 ರಲ್ಲಿ ಚಳುವಳಿಯಲ್ಲಿ ಇರುವಾಗಲೇ ನಮ್ಮ ಮದುವೆ ಆಯಿತು. ನನ್ನ ವಿರುದ್ಧ ಆಂಧ್ರದಲ್ಲಿ ಕೇಸು ಇದ್ದಿದ್ದರಿಂದ 2009 ರಲ್ಲಿ ನಾನು ಆಂಧ್ರಪ್ರದೇಶದ ಸರ್ಕಾರದ ಮುಂದೆ ಶರಣಾಗಿ ಮುಖ್ಯವಾಹಿನಿಗೆ ಬಂದೆ. ಈಗ ನನ್ನ ಪತ್ನಿ ಕೂಡ ಸಿದ್ದರಾಮಯ್ಯನವರ ನಕ್ಸಲ್ ಶರಣಾಗತಿ ಪ್ಯಾಕೇಜ್ ಅನ್ವಯ ಶರಣಾಗಿದ್ದಾರೆ. ಅವಳಿಗೂ ಮುಖ್ಯವಾಹಿನಿಗೆ ಬಂದು ಸಂವಿಧಾನಬದ್ಧವಾಗಿ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದಾರೆ.
PublicNext
03/02/2025 01:05 pm