", "articleSection": "Infrastructure,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738566319-V2~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "LaxmanChikkodi" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಅಥಣಿ: ಕೆಎಸ್‌ಆರ್‌ಟಿಸಿ ಬಸ್ಸು ಹೊಗೆಯುಗುಳುವ ಪರಿ ನೋಡಿದರೆ ಅಬ್ಬಾ ಎನಿಸುತ್ತದೆ...! ವಾಯುಮಾಲಿನ್ಯ ತಪಾಸಣೆಯ ಅವಧಿ ಒಂದು ದಿನ ಮುಗಿದರೂ ದಂಡದ ಮ...Read more" } ", "keywords": ",Belgaum,Infrastructure,Government,News,Public-News", "url": "https://publicnext.com/node" }
ಅಥಣಿ: ಕೆಎಸ್‌ಆರ್‌ಟಿಸಿ ಬಸ್ಸು ಹೊಗೆಯುಗುಳುವ ಪರಿ ನೋಡಿದರೆ ಅಬ್ಬಾ ಎನಿಸುತ್ತದೆ...! ವಾಯುಮಾಲಿನ್ಯ ತಪಾಸಣೆಯ ಅವಧಿ ಒಂದು ದಿನ ಮುಗಿದರೂ ದಂಡದ ಮೇಲೆ ದಂಡ ಬೀಳುತ್ತದೆ. ಆದ್ರೆ ಈ ಸರ್ಕಾರಿ ವಾಹನ ವಿಪರೀತ ಹೊಗೆ ಬಿಡುವುದಕ್ಕೆ ಏನು ದಂಡ..? ಅಂದರೆ ಹೊಗೆ ಬಿಡುವುದಕ್ಕೆ ಅಲ್ಲ ದಂಡ, ಹೊಗೆ ಇಲ್ಲದೇ ಇರುವುದಕ್ಕೆ ದಂಡವೇ ಎಂದು ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ.
ಇದು ಅಥಣಿ ಪಟ್ಟಣದಿಂದ-ಪಾಂಡೆಗಾವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆ ಎಸ್ ಆರ್ ಟಿ ಸಿ ಬಸ್. ಇದೇನು ರಸ್ತೆ ಮಧ್ಯೆ ಬಸ್ ಕೆಟ್ಟು ಹೋಗಿ ಹೊಗೆ ಬರ್ತಿರೋದಲ್ಲ, ಬದಲಾಗಿ ಅಥಣಿ ಬಸ್ ನಿಲ್ದಾಣದಿಂದಲೇ ಪಟ್ಟಣದುದ್ದಕ್ಕೂ ಈ ರೀತಿಯಾಗಿ ಹೊಗೆ ಉಗುಳುತ್ತಾ ಹೊರಟಿದೆ.
KA,23 F0988 ವಾಹನ ಸಂಖ್ಯೆ ಹೊಂದಿರುವ ಸರ್ಕಾರಿ ಬಸ್ ಇದಾಗಿದ್ದು, ಹಿಂದೆ ಬಂದ ವಾಹನ ಸವಾರರಿಗೆ ರಸ್ತೆ ಕಾಣದಂತೆ ಹೊಗೆ ತುಂಬಿಕೊಂಡರೂ ಬಸ್ ಚಾಲಕ ಮಾತ್ರ ರಾಜಾರೋಷವಾಗಿ ಬಸ್ ಚಲಾವಣೆ ಮಾಡಿ ನಿರ್ಲಕ್ಷ ತೋರಿದ್ದಾರೆ. ಬಸ್ ಸ್ಥಿತಿ ನೋಡಿದ ಜನರು ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Kshetra Samachara
03/02/2025 12:35 pm