ಶಿಗ್ಗಾವಿ: 80 ವರ್ಷದ ವೃದ್ಧನೊಬ್ಬ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಜೇಕನಕಟ್ಟಿ ರಸ್ತೆಬಳಿ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನಿವೃತ್ತ ಸರ್ಕಾರಿ ನೌಕರ ಅಬ್ದುಲರಹೀಂ ಗಪ್ಪರಸಾಬ್ ಖಾಜಿ (80) ಜನವರಿ 30ರಂದು ಪಕ್ಕದ ಮನೆಯ 13 ವರ್ಷದ ಅಪ್ರಾಪ್ತಿಯನ್ನು ತನ್ನ ಫೋನ್ ಪಾಸ್‌ವರ್ಡ್ ತೆಗೆದುಕೊಡುವಂತೆ ಮನೆಗೆ ಕರೆದಿದ್ದಾನೆ. ಬಳಿಕ ಮಲಗುವ ಕೋಣೆಗೆ ಕರೆದೊಯ್ದು ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ ಎಂಬ ಬಾಲಕಿ ಹೇಳಿಕೆ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಶಿಗ್ಗಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
PublicNext
03/02/2025 11:11 am