", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/405356-1738637597-t.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ: ಸಾಲಗಾರರ ಕಾಟಕ್ಕೆ ಬೇಸತ್ತು, ಇಬ್ಬರು ಮಕ್ಕಳಿಗೆ ವಿಷ ಉಣಸಿ ತಂದೆಯೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ತಾಲೂಕು ಹಳೆರಿತ್ತಿಯಲ್ಲಿ ...Read more" } ", "keywords": "Haveri, Farmer Suicide Attempt, Debt Crisis, Borrower Harassment, Family Tragedy, Poisoning Children, Financial Stress, Karnataka News, Indian Farmer Issues, Debt Relief, Suicide Prevention,Crime", "url": "https://publicnext.com/node" }
ಹಾವೇರಿ: ಸಾಲಗಾರರ ಕಾಟಕ್ಕೆ ಬೇಸತ್ತು, ಇಬ್ಬರು ಮಕ್ಕಳಿಗೆ ವಿಷ ಉಣಸಿ ತಂದೆಯೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ತಾಲೂಕು ಹಳೆರಿತ್ತಿಯಲ್ಲಿ ನಡೆದಿದೆ.
47 ವರ್ಷದ ನಾಗೇಶ ಪವಾಡೆಪ್ಪರ ತನ್ನ ಮಗ 10 ವರ್ಷದ ಆಕಾಶ ಮಗಳು ಹಾಗೂ 8 ವರ್ಷದ ವೈಷ್ಣವಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ದುಡಿಯಲು ಹೋಗಿದ್ದ ನಾಗೇಶಗೆ ಪತ್ನಿ ಸಂಘಕ್ಕೆ ಕಟ್ಟಲು ಎಷ್ಟು ಹಣ ತಂದಿದ್ದಿಯಾ ಎಂದು ಕೇಳಿದ್ದಾಳೆ. ಪತ್ನಿ ಜೊತೆ ಜಗಳಮಾಡಿಕೊಂಡು ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕವನ್ನು ಮಕ್ಕಳಿಗೆ ಕುಡಿಸಿ, ತಾನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ನಾಗೇಶ್ ಮತ್ತು ಇಬ್ಬರು ಮಕ್ಕಳಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
PublicNext
04/02/2025 08:23 am