", "articleSection": "Health & Fitness,Government", "image": { "@type": "ImageObject", "url": "https://prod.cdn.publicnext.com/s3fs-public/222042-1738417362-Add-a-heading---2025-02-01T191125.794.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivaniBangalore" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದಿಂದ ನಗರದ ಎಲ್ಲಾ ಮಸ್ಟರಿಂಗ್ ಕೇಂದ್ರಗಳಲ್ಲಿ ಸ್ವಚ್ಛತಾ ಸಿಬ್ಬಂದಿಗೆ ಆರೋಗ್ಯ ಮತ್ತು ಸ್...Read more" } ", "keywords": "BBMP, Bengaluru civic workers, awareness campaign, waste management, sanitation, civic awareness, Karnataka government initiatives, urban development, municipal corporation. ,Bangalore,Bangalore-Rural,Health-and-Fitness,Government", "url": "https://publicnext.com/node" }
ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದಿಂದ ನಗರದ ಎಲ್ಲಾ ಮಸ್ಟರಿಂಗ್ ಕೇಂದ್ರಗಳಲ್ಲಿ ಸ್ವಚ್ಛತಾ ಸಿಬ್ಬಂದಿಗೆ ಆರೋಗ್ಯ ಮತ್ತು ಸ್ವಚ್ಛತೆಯ ಕುರಿತು ಜಾಗೃತಿ ಕಾರ್ಯವನ್ನು ನಡೆಸಲಾಯಿತು.
ನಗರದಲ್ಲಿ ಪ್ರತಿನಿತ್ಯ ಸ್ವಚ್ಛತೆ ಕಾಪಾಡುವಂತಹ ಸ್ವಚ್ಛತಾ ಸಿಬ್ಬಂದಿಯು ಅವರ ಸುರಕ್ಷತೆಯ ಮೇಲೆ ಹೆಚ್ಚು ಗಮನ ನೀಡದೆ ಸ್ವಚ್ಛತಾ ಕಾರ್ಯದಲ್ಲಿ ಕಾರ್ಯನಿರತರಾಗಿರುತ್ತಾರೆ. ಅವರೆಲ್ಲರ ಸುರಕ್ಷೆತಯ ದೃಷ್ಟಿಯಿಂದ ಪಾಲಿಕೆ ವ್ಯಾಪ್ತಿಯ ಎಲ್ಲಾ ಮಸ್ಟರಿಂಗ್ ಕೇಂದ್ರಗಳಲ್ಲಿ ಪೌರಕಾರ್ಮಿಕರು, ಆಟೋ ಟಿಪ್ಪರ್ ಚಾಲಕರು ಹಾಗೂ ಸಹಾಯಕ ಸಿಬ್ಬಂದಿಗೆ ಯಾವ ರೀತಿ ಸುಚಿತ್ವವನ್ನು ಕಾಪಾಡಿಕೊಂಡು ಸ್ವಚ್ಛತಾ ಕಾರ್ಯದಲ್ಲಿ ಕಾರ್ಯನಿರತರಾಗಬೇಕೆಂದು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಯನ್ನು ರಕ್ಷಿಸುವ ಮತ್ತು ಹೆಚ್ಚು ಸುಸ್ಥಿರ ಪರಿಸರವನ್ನು ಬೆಳೆಸುವ ಗುರಿಯನ್ನು ಹೊಂದಿರುವ 2 ಕ್ರಿಯಾಶೀಲ ಅಂಶಗಳ ಮೇಲೆ, ಎಲ್ಲಾ ಮಸ್ಟರಿಂಗ್ ಕೇಂದ್ರಗಳಲ್ಲಿ ಜಾಗೃತಿ ಕಾರ್ಯದ ಮೂಲಕ ಸರಿಯಾಗಿ ಅನುಷ್ಟಾನಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರೀಕರಿಸಲಾಗಿದೆ.
ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಎಲ್ಲಾ ಸಿಬ್ಬಂದಿಯು ಸರಿಯಾದ ರಕ್ಷಣಾತ್ಮಕ ಸಾಧನಗಳನ್ನು ಧರಿಸಬೇಕು. ಕೈಗವಸು, ಮುಖವಾಡ, ಗಮ್ ಬೂಟ್ ಸೇರಿದಂತೆ ಇನ್ನಿತರೆ ಸುರಕ್ಷತಾ ಕ್ರಮಗಳು ಕೈಗೊಳ್ಳುವುದು. ಅದರಿಂದ ಆರೋಗ್ಯ ಸಮಸ್ಯೆಗಳು ಹಾಗೂ ಯಾವುದಾದರು ಅನಾಹುತಗಳು ಸಂಭವಿಸುವುದನ್ನು ತಡೆಯಬಹುದಾಗಿರುತ್ತದೆ.
ನಗರದಲ್ಲಿ ಪ್ರಮುಖವಾಗಿ ಮರುಬಳಕೆ ಮತ್ತು ವಿಲೇವಾರಿ ಪ್ರಕ್ರಿಯೆಗಳನ್ನು ಹೆಚ್ಚಿಸಲು ಮೂಲದಲ್ಲಿಯೇ ತ್ಯಾಜ್ಯ ಬೇರ್ಪಡಿಸುವಿಕೆಯ ಮಹತ್ವವದ ಕುರಿತು ನಾಗರಿಕರಲ್ಲಿ ಹೆಚ್ಚು ಅರಿವು ಮೂಡಿಸಬೇಕಿದೆ. ಮನೆ-ಮನೆ ಕಸ ಸಂಗ್ರಹಣೆಯ ಸಮಯದಲ್ಲಿ ನಿವಾಸಿಗಳಿಗೆ ಹಸಿ ಮತ್ತು ಒಣ ಕಸವನ್ನು ಕಡ್ಡಾಯವಾಗಿ ಪ್ರತ್ಯೇಖಿಸಿ ನೀಡಲು ತಿಳಿಸುವುದು, ಕಸವನ್ನು ಪ್ಲಾಸಟಿಕ್ ಕವರ್‌ನಲ್ಲಿ ನೀಡದೆ ಡಬ್ಬದಲ್ಲಿ ಹಾಕಿ ನೀಡುವುದು.
ಈ ವೇಳೆ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾದ ರಮಾಮಣಿ, ಉಪ ಪ್ರಧಾನ ವ್ಯವಸ್ಥಾಪಕರು, ಸಹಾಯಕ ಪ್ರಧಾನ ವ್ಯವಸ್ಥಾಪಕರು, ಮಾರ್ಷಲ್‌ಗಳು, ಸ್ವಯಂಸೇವಕರು, ಎನ್.ಜಿ.ಒಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Kshetra Samachara
01/02/2025 07:13 pm