ಮಡಿಕೇರಿ: ರಾಜ್ಯದಲ್ಲಿ ಇದೀಗ ಮೈಕ್ರೋಫೈನಾನ್ಸ್ ಹಾವಳಿ ಹೆಚ್ಚಾಗಿದ್ದು ಜನತೆ ಇದರಿಂದ ಸಾಲ ಪಡೆದುಕೊಂಡು ಸಮಸ್ಯೆ ಎದುರಿಸುತ್ತಿದ್ದಾರೆ. ಇದು ನನ್ನ ಗಮನಕ್ಕೂ ಬಂದಿದೆ ಮೈಕ್ರೋಫೈನಾನ್ಸ್ ಸಂಸ್ಥೆಗಳ ನಿಯಂತ್ರಣಕ್ಕೆ ಸುಗ್ರೀವಾಜ್ಞೆ ತರುತ್ತೇನೆ.
ಸಾಕಷ್ಟು ಮೈಕ್ರೋ ಫೈನಾನ್ಸ್ ಕಂಪೆನಿಗಳು ಜನರಿಗೆ ಕಿರುಕೂಳ ನೀಡುತ್ತಿವೆ, ಇದಕ್ಕೆ ಯಾರು ಕೂಡ ಭಯ ಪಡುವ ಅಗತ್ಯ ಇಲ್ಲ ಎಲ್ಲಾದಕ್ಕೂ ಕಾಂಗ್ರೆಸ್ ಸರ್ಕಾರ ಕಡಿವಾಣ ಹಾಕುತ್ತೆ ಎಂದು ಸಿದ್ದರಾಮಯ್ಯ ಭಾಗಮಂಡಲದಲ್ಲಿ ತಿಳಿಸಿದ್ರು. ಜೊತೆಗೆ ಕೊಡಗಿನಲ್ಲಿ ಸಿ& ಡಿ ಲ್ಯಾಂಡ್ ಸಮಸ್ಯೆಯನ್ನ ಕೊಡಗಿನ ರೈತರು ಎದುರಿಸತ್ತಿದ್ದಾರೆ. ಕೊಡಗಿನ ರೈತರಿಗೆ ಈ ವಿಚಾರದಲ್ಲಿ ಭಯ ಭೇಡ ಸಿ ಅಂಡ್ ಡಿ ಭೂಮಿಗೆ ಸಂಬಂಧಿಸಿದಂತೆ ಸಮಿತಿಯನ್ನು ರಚಿಸಿ, ಅದರ ವರದಿಯಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಆದ್ದರಿಂದ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಕೊಡಗಿನ ರೈತರಿಗೆ ಅಭಯ ನೀಡಿದ್ರು.
PublicNext
01/02/2025 08:33 am