ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿ: ಮೇಲ್ಸೆತುವೆಗೆ ಕೆದಬಾಂಡಿ ರಾಮಯ್ಯ ಗೌಡರ ಹೆಸರಿಡುವಂತೆ ಗೌಡಸಂಘಟನೆಗಳ ಮನವಿ

ಮಡಿಕೇರಿ: ಕೊಡಗಿನ ಪವಿತ್ರ ಕ್ಷೇತ್ರ ಭಾಗಮಂಡಲದಲ್ಲಿ ಭಾಗಮಂಡಲ ಲೋಕಾರ್ಪಣೆಗೊಂಡ ತಲಕಾವೇರಿ ರಸ್ತೆ ಸಂಪರ್ಕಿಸುವ ಮೇಲ್ವೇತುವೆಗೆ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಹೆಸರನ್ನು ಇಟ್ಟು ಅವರ ಪುತ್ಥಳಿಯನ್ನು ಸ್ಥಾಪಿಸಬೇಕೆಂದು ಗೌಡ ಸಂಘಟನೆಗಳು ಒತ್ತಾಯಿಸಿದೆ.

ಭಾಗಮಂಡಲದ ಗ್ರಾಮ ಪಂಚಾಯತಿಯ ಪಿಡಿಒ ನಂದ ಅವರಿಗೆ ಮನವಿ ಸಲ್ಲಿಸಿದ ಭಾಗಮಂಡಲ ಗೌಡ ಸಮಾಜ, ಕಾರುಗುಂದ ಗೌಡ ಸಮಾಜ, ಕೊಡಗು ಗೌಡ ವಿದ್ಯಾಸಂಘ, ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಪ್ರಮುಖರು, ಕೆದಂಬಾಡಿ ರಾಮಯ್ಯ ಗೌಡರ ಚಾಣಾಕ್ಷ ನಡೆಗಳು ಇಡೀ ರೈತ ಹೋರಾಟವನ್ನು ನಿಯಂತ್ರಿಸಿ ಯಶಸ್ಸು ಕಂಡಿದ್ದು ಅವಿಸ್ಮರಣೀಯ. ತಮ್ಮ ಸರ್ವಸ್ವವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧಾರೆಯೆರೆದ ರಾಮಯ್ಯ ಗೌಡರ ಶ್ರೇಷ್ಠ ನಾಯಕತ್ವ ಮಂಗಳೂರಿನ ಬಾವುಟಗುಡ್ಡೆಯಲ್ಲಿ ಬ್ರಿಟೀಷರ ಧ್ವಜವನ್ನು ಕೆಳಗಿಳಿಸಿ ಕ್ರಾಂತಿ ಧ್ವಜವನ್ನು ಏರಿಸಿ 13 ದಿನಗಳ ಕಾಲ ರಾಜ್ಯಭಾರ ಮಾಡಿ ಸ್ವಾತಂತ್ರ್ಯವನ್ನು ಗಳಿಸಿತು. ಇಂತಹ ಸ್ವಾತಂತ್ರ್ಯ ವೀರರನ್ನು ಗುರುತಿಸುವ, ಅವರ ಸಾಧನೆಗಳನ್ನು ಶಾಶ್ವತವಾಗಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಮೇತುವೆಗೆ ಕೆದಂಬಾಡಿ ರಾಮಯ್ಯ ಗೌಡರ ಹೆಸರನ್ನು ನಾಮಕರಣ ಮಾಡಬೇಕೆಂದು ಮನವಿ ಮಾಡಿದರು.

ಮನವಿ ನೀಡುವ ಸಂದರ್ಭ ವಿಎಸ್‌ಎಸ್‌ಎನ್ ಅಧ್ಯಕ್ಷ ಹೊಸೂರು ಸತೀಶ್, ಕುಯ್ಯುಮುಡಿ ಮನೋಜ್, ಭಾಗಮಂಡಲ ಗೌಡ ಸಮಾಜದ ನಿರ್ದೇಶಕರುಗಳು, ಕಾರುಗುಂದ ಗೌಡ ಸಮಾಜ ಅಧ್ಯಕ್ಷ ಕೊಡಪಾಲು ಗಪ್ಪು, ಅರೆಭಾಷೆ ಅಕಾಡೆಮಿ ಸದಸ್ಯ ಸೂದನ ಈರಪ್ಪ, ಕುದುಪಜೆ ಪ್ರಕಾಶ್, ಕೊಡಗು ಗೌಡ ವಿದ್ಯಾಸಂಘದ ದೇವಂಗೋಡಿ ಹರ್ಷ, ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಅಧ್ಯಕ್ಷ ಕುದುಕುಳಿ ಕಿಶೋರ್, ನಿಡ್ಯಮಲೆ ಚಲನ್, ಶೆಟ್ಟಿಜನ ದಿಲ್ಲಿ ಮತ್ತು ಪದಾಧಿಕಾರಿಗಳು, ಪಂಚಾಯತಿ ಸದಸ್ಯರಾದ ದಂಡಿನ ಜಯಂತ್, ನಿಡ್ಯಮಲೆ ರವಿ, ಗ್ರಾಮಸ್ಥರಾದ ಕೇಕಡ ಇಂದುಮತಿ, ಕೋಳಿಬೈಲು ಮಾಲತಿ, ಅಮೆ ಜಯ, ಕೆದಂಬಾಡಿ ವಿವೇಕ್ ಮತ್ತು ಕೆದಂಬಾಡಿ ಕುಟುಂಬಸ್ಥರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

01/02/2025 08:49 am

Cinque Terre

520

Cinque Terre

0