ವಿರಾಜಪೇಟೆ: ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ(ರಿ) ಇವರ ವತಿಯಿಂದ ಪರಿಸರ ಸಂರಕ್ಷಣಾ ಜಾಥಾವನ್ನು ಆಯೋಜಿಸಿದ್ದು ತೆಲುಗರ ಬೀದಿಯ ಮಾರಿಯಮ್ಮ ದೇವಸ್ಥಾನ ದಿಂದ ತಾಲೂಕು ಮೈದಾನದವರೆಗೆ ಸಾಗಿತ್ತು. ಪಕ್ಷಿ ತಜ್ಞ ಡಾ ನರಸಿಂಹ ಹಾಗೂ ಪುರಸಭೆ ಸದಸ್ಯ ರಾಜೇಶ್ ಪದ್ಮನಾಭ ಜಾಥಾಕ್ಕೆ ಚಾಲನೆ ನೀಡಿದರು.
ನಗರದ ಗಡಿಯಾರ ಕಂಬದ ಬಳಿ ರೋಲಿಕ್ಸ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆಯ ಬಗ್ಗೆ ಬೀದಿ ನಾಟಕವನ್ನ ಮಾಡುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಪುರಸಭೆ ವತಿಯಿಂದ ಜಾಥಾದಲ್ಲಿ ಭಾಗವಹಿಸಿದ ಶಾಲಾ ವಿದ್ಯಾರ್ಥಿಗಳಿಗೆ ಪುರಸಭೆಯ ಅಧ್ಯಕ್ಷ ದೇಚಮ್ಮ ಕಾಳಪ್ಪ ಹಾಗೂ ಪುರಸಭೆಯ ಸಿಬ್ಬಂದಿ ಸಿಹಿಯನ್ನು ಹಂಚಿದರು. ನಗರದ ಮುಖ್ಯ ಬೀದಿಗಳಲ್ಲಿ ಜಾಥಾ ಸಾಗಿ ತಾಲ್ಲೂಕು ಕಚೇರಿಗೆ ತೆರಳಿ ಮನವಿ ಪತ್ರವನ್ನು ತಾಲ್ಲೂಕು ದಂಡ ಅಧಿಕಾರಿಯಾದ ರಾಮಚಂದ್ರರವರಿಗೆ ನೀಡಲಾಯಿತು .
Kshetra Samachara
01/02/2025 05:18 pm