ಶಿರಹಟ್ಟಿ: ತಾಲೂಕಿನ ತೆಗ್ಗಿನಭಾವನೂರ ಗ್ರಾಮದ ಹೊರವಲಯದಲ್ಲಿ ಇಂದು ಕಂಡಪ್ಪ ದನವೇ ಇವರ ಜಮೀನಿನಲ್ಲಿ ಶೇಖರಿಸಿಟ್ಟಿದ್ದ ಸುಮಾರು 11 ಬಣವಿಗಳಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಹೌದು.... ಇಂದು ಗ್ರಾಮದ ರುದ್ರಯ್ಯ ಗು. ಶಂಕಿನಮಠ, ದುದ್ದುಸಾಬ ಕೋಟಿಹಾಳ, ಫಕ್ಕೀರವ್ವ ಹರಿಜನ, ಗುಡುಸಾಬ ಇ. ಲಂಗೋಟಿ, ಹುಸೇನಫೀರ್ ಬಾ. ಕೋಟಿಹಾಳ, ಹನುಮಂತ ಮ. ಕುದರಿ, ಬಾಬುಸಾಬ ಕೋಟಿಹಾಳ, ನಿರ್ಮಲಾ ಬ. ಹೂಗಾರ, ದಾವಲಸಾಬ ಶ. ತಹಶೀಲ್ದಾರ, ರಫೀಕ್ ಇ. ಲಂಗೋಟಿ, ಮುಸ್ತಾಕ್ ಅ. ವಾಲಿಕಾರ ಇವರುಗಳಿಗೆ ಸಂಬಂಧಿಸಿದ ಶೆಂಗಾ ಹೊಟ್ಟು, ಗೋವಿನ ಜೋಳದ ಹೊಟ್ಟು ಹಾಗೂ ತೊಗರಿ ಹೊಟ್ಟಿನ ಬಣವಿಗಳಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟವಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಪರಶು ತಳವಾರ ತಿಳಿಸಿದ್ದಾರೆ.
ಬೆಂಕಿ ಬಿದ್ದ ಸ್ಥಳಕ್ಕೆ ಶಿರಹಟ್ಟಿಯ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ: ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಶಿರಹಟ್ಟಿ
Kshetra Samachara
31/01/2025 08:31 pm