", "articleSection": "Government,Accident,Public Feed", "image": { "@type": "ImageObject", "url": "https://prod.cdn.publicnext.com/s3fs-public/39269620250131061925filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "8904774317" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಳಗಾವಿ: ಸರ್ಕಾರದ ನಿರ್ದೇಶನದಂತೆ ಶ್ರೀ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರ...Read more" } ", "keywords": "Node,Belgaum,Government,Accident,Public-Feed", "url": "https://publicnext.com/node" }
ಬೆಳಗಾವಿ: ಸರ್ಕಾರದ ನಿರ್ದೇಶನದಂತೆ ಶ್ರೀ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಜ. 31 ರಂದು ನಡೆದ ಜಯಂತಿಗಳ ಆಚರಣೆ ಕುರಿತು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶ್ರೀ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮವನ್ನು ಫೆ.15 ರಂದು ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಆಚರಿಸಲಾಗುವುದು, ಕಾರ್ಯಕ್ರಮಕ್ಕೆ ಅವಶ್ಯ ರೂಪರೇಷೆಗಳನ್ನು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿ ವರ್ಷದಂತೆ ಮೆರವಣಿಗೆ, ಕಲಾ ಕಲಾತಂಡಗಳ ಪ್ರದರ್ಶನ, ಉಪನ್ಯಾಸಕರ ನೇಮಕ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ವಿಜಯಕುಮಾರ ಹೊನಕೇರಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ ಫೆ.19 ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಕಾರ್ಯಕ್ರಮವನ್ನು ಕಪಿಲೇಶ್ವರ ರಸ್ತೆಯ ಶಿವಾಜಿ ಉದ್ಯಾನವನದಲ್ಲಿ ಆಯೋಜನೆ ಮಾಡಲಾಗುವುದು. ನಿಗದಿತ ದಿನಾಂಕದಂದು ಬೆಳಿಗ್ಗೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಬಳಿಕ ಸಂಜೆ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸುವಂತೆ ನಿಯಮಾವಳಿಯ ಪ್ರಕಾರ ಮುಂಚಿತವಾಗಿ ಆಮಂತ್ರಣ ಪತ್ರಿಕೆಗಳನ್ನು ಮುದ್ರಣಗೊಳಿಸಿ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.
ನಗರ ಪೊಲೀಸ್ ಸಹಾಯಕ ಆಯುಕ್ತ ಸದಾಶಿವ ಕಟ್ಟಿಮನಿ, ವಿವಿಧ ಸಮಾಜದ ಮುಖಂಡರಾದ ರಾಮಾ ರಾಠೋಡ, ಪಾಂಡುರಂಗ ನಾಯಕ, ಬಿ. ಪಿ ಲಮಾಣಿ, ಲೋಕೇಶ್ ರಾಠೋಡ, ರಾಜು ರಾಠೋಡ, ವಾಯ್.ಎನ್ ಲಮಾಣಿ ಹಾಗೂ ಎ.ಬಿ ಕುಂಬಾರ, ಐ.ಎಸ್ ಕುಂಬಾರ, ಸಿ.ಬಿ ಯಡೂರ, ರಮೇಶ ಕುಂಬಾರ, ಬಸವರಾಜ ಕುಂಬಾರ, ಮೋಹನ ಬೇವಿನಗಿಡದ ಸೇರಿದಂತೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
Kshetra Samachara
31/01/2025 06:19 pm