ಮಂಗಳೂರು: ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಸದ್ಯ ಉತ್ತಮವಾಗಿದೆ ಎಪ್ರಿಲ್, ಮೇ ತಿಂಗಳ ಪರಿಸ್ಥಿತಿ ಅವಲೋಕಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ತಿಳಿಸಿದ್ದಾರೆ.
ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಯಾವ ರೀತಿ ಕ್ರಮ ವಹಿಸಲಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು. ಮೇಯರ್ ಅವಧಿ ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಿಲ್ಲ. ಈ ಹಿಂದೆ ಜಾರಿಗೆ ತಂದಿರುವ ಯೋಜನೆಗಳನ್ನು ಮುಂದುವರಿಸಲಾಗುವುದು ಎಂದ ಅವರು, ಮಸಾಜ್ ಪಾರ್ಲರ್ ಹಾಗೂ ಯುನಿಸೆಕ್ಸ್ ಸೆಲೂನ್‌ಗಳ ಮೇಲೆ ಆರೋಗ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ನಿರಂತರ ಪರಿಶೀಲನೆಯ ಮೂಲಕ ನಿಗಾ ವಹಿಸಲಿದೆ.
ಬೀದಿಬದಿ ವ್ಯಾಪಾರಿಗಳಿಗೆ ಗಡುವು ನೀಡಲಾಗಿದ್ದು, ವಲಯಕ್ಕೆ ಸ್ಥಳಾಂತರವಾಗುವಂತೆ ನೋಟಿಸ್ ನೀಡಲಾ ಗಿದೆ. ಜ.30ರೊಳಗೆ ಸ್ಥಳಾಂತರವಾಗದಿದ್ದಲ್ಲಿ ಗುರುತಿನ ಚೀಟಿ ರದ್ದುಗೊಳಿಸಲಾಗುವುದು ಎಂದು ಮನಪಾ ಮೇಯರ್ ಮನೋಜ್ ಕುಮಾರ್ ಎಚ್ಚರಿಸಿದ್ದಾರೆ.
ಇದಕ್ಕಾಗಿ ಪಾಲಿಕೆಯಲ್ಲಿ ಯಾವುದೇ ಪ್ರತ್ಯೇಕ ತಂಡ ಇಲ್ಲ ಎಂದರು. ಸಾರ್ವಜನಿಕ ಶೌಚಾಲಯಗಳ ಬೀಗ ತೆರವುಗೊಳಿಸಬೇಕೆಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಶೌಚಾಲಯಗಳ ನಿರ್ವಹ ಣೆಯ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಪಾಲಿಕೆ ಸಭೆಯಲ್ಲೂ ಚರ್ಚಿಸಲಾಗಿದ್ದು, ಪೂರಕ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
Kshetra Samachara
30/01/2025 09:47 pm