ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಹಳೆಯಂಗಡಿಯಲ್ಲಿ ಭಾರತದ ಸಂವಿಧಾನದ ಕಾರ್ಯಗಾರ

ಮುಲ್ಕಿ: ಭಾರತದ ಸಂವಿಧಾನದ  ಬಗ್ಗೆ ಕಾನೂನು ಕಾರ್ಯಗಾರ ಹಳೆಯಂಗಡಿಯ ಇಂಡಿಯನ್ ಯೋಗ ಮಂದಿರದಲ್ಲಿ ನಡೆಯಿತು.

 

ಜಾರ್ಜು ಪಾಲನ್ನ ಉದ್ಘಾಟಿಸಿ ಮಾತನಾಡಿ “ಭಾರತದ ದೇಶದಲ್ಲಿ ನಾವೆಲ್ಲರೂ ಪ್ರವಿತ್ರ ಸಂವಿಧಾನವನ್ನು ಗೌರವಿಸಿ ಕಾನೂನಿನ ಅಡಿ ಸಿಗುವ ಅವಕಾಶದಡಿ ಸಾಮರಸ್ಯದಿಂದ ಬದುಕು ನಡೆಸುವುದು, ದೇಶದ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಭಾರತದ ಕಾನೂನು ನೆರವು ಘಟಕದ ಅಧ್ಯಕ್ಷ ಡೇನಿಯಲ್ ದೇವರಾಜ್, ವಹಿಸಿದ್ದರು

ಸಂಪನ್ಮೂಲ ವ್ಯಕ್ತಿಯಾಗಿ ಭಾರತ ಸರ್ವೋಚ್ಚ ನ್ಯಾಯಾಲಯದ ವಕೀಲರಾದ ಸುಭಾಸ್ ಚಂದ್ರ ಸಾಗರ್, ಮಾಹಿತಿ ನೀಡಿದರು

ಬೆಂಗಳೂರು ವಕೀಲರಾದ. ಅರವಿಂದ ಭಟ್ ವಕೀಲರು ಮೂಲಭೂತ ಹಕ್ಕುಗಳು ಮತ್ತು ಸಂವಿಧಾನದ  ಬಗ್ಗೆ ಮಾಹಿತಿ ನೀಡಿದರು

ಮುಖ್ಯ ಅತಿಥಿಗಳಾಗಿ ವಕೀಲರಾದ ಕೇಶವ ರಾಜ್ , ಪ್ರೊ. ರಾಜೀವಿ, ಪಾ.ರಾಜೇಶ್ ಕೋಟ್ಯಾನ್, ನ್ಯಾನ್ಸಿ ಕರ್ಕಡ, ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

30/01/2025 09:33 pm

Cinque Terre

396

Cinque Terre

0

ಸಂಬಂಧಿತ ಸುದ್ದಿ